Site icon Ullalavani

ಪಂಚಾಯಿತಿಗಳಿಗೆ ತಾರತಮ್ಯ ಧೋರಣೆಯಿಂದ ಅನುದಾನದ ಕೊರತೆ: ಬೋಳಿಯಾರ್

UN NETWORKS

ಉಳ್ಳಾಲ: ರಾಜ್ಯ ಸರಕಾರದ ತಾರತಮ್ಯ ಧೋರಣೆಯಿಂದ, ಪಂಚಾಯಿತಿಗೆ ಅನುದಾನದ ಕೊರತೆಯುಂಟಾಗಿದ್ದು, ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ತಕ್ಷಣವೇ ಈ ಭಾಗದ ಸಮಸ್ಯೆಗಳ ಪಟ್ಟಿ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ.

ಅವರು ಮುನ್ನೂರು ಗ್ರಾಮದ ಸಂತೋಷನಗರ 6ನೇ ವಾರ್ಡಿನ 5ನೇ ಅಡ್ಡರಸ್ತೆ ಕಾಂಕ್ರೀಟಿಕರಣಗೊಳಿಸಿರುವುದನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಂದ ಹಲವು ಬೇಡಿಕೆಗಳಿದ್ದು, ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ತಕ್ಷಣ ಸಮಸ್ಯೆಗಳ ಪಟ್ಟಿ ಮಾಡಿ ಕಾಮಗಾರಿಗಳನ್ನು ಪೂರೈಸಲಾಗುವುದು. ಅಭಿವೃದ್ಧಿಯ ಚಿಂತನೆ ನಡೆಸುವಂತಹ ಜಿ.ಪಂ ಸದಸ್ಯರು ಹಾಗೂ ಮುನ್ನೂರು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿದ್ದಾರೆ. ಆದರೆ ರಾಜ್ಯ ಸರಕಾರ ಅನುದಾನವನ್ನು ಪೂರೈಸದೆ ಅಭಿವೃದ್ಧಿ ಕಾಮಗಾರಿಗಳು ನೆರವೇರಿಸಲು ತೊಂದರೆಯಾಗಿದೆ. ಆದರೆ ಬಿಜೆಪಿ ಸರಕಾರ ಬಂದಲ್ಲಿ ಪಂಚಾಯಿತಿ ಹಾಗೂ ಜಿ.ಪಂ ಸದಸ್ಯರ ಉದ್ದೇಶಗಳು ಈಡೇರುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪ.ಆರ್.ಶೆಟ್ಟಿ, ಗುತ್ತಿಗೆದಾರ ಮಾಧವ ಕಿನ್ಯಾ, ಸದಸ್ಯರುಗಳಾದ ಕಿಶೋರ್ ಕುಮಾರ್, ಕಿರಣ್ ಶೆಟ್ಟಿ, ಬಿಜೆಪಿ ಮುಖಂಡ ಹರಿಯಪ್ಪ ಸಾಲ್ಯಾನ್, ಹಿರಿಯರಾದ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.

Exit mobile version