UN NETWORKS
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿಗೆ ಅನುದಾನಗಳನ್ನು ಯೋಚನೆ ಮಾಡಿ ಬಿಡುಗಡೆಗೊಳಿಸುತ್ತಿದೆ. ಇದರಿಂದ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕುಂಠಿತವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಹೇಳಿದ್ದಾರೆ.
ಎರಡು ವರ್ಷದಿಂದ ಜನ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀರಿಗೆ ಅನುದಾನವೇ ಒದಗಿಸಿಲ್ಲ. ಆದರೂ ಕ್ಷೇತ್ರವ್ಯಾಪಿ ನೀರಿನ ಸಮಸ್ಯೆ ಈಡೇರಿದೆ ಎಂದು ಅಪಪ್ರಚಾರ ನಡೆಸುತ್ತಾ ಬರಲಾಗುತ್ತಿದೆ. ಪಂಚಾಯಿತಿನ ಯಾವುದೇ ಸದಸ್ಯರಿಗೂ ಅನುದಾನ ಬಾರದಿರುವುದು ಖೇದಕರ. ಉಪಕೇಂದ್ರದಲ್ಲಿ ಹಂಚಿನ ಮಹಡಿ ಇದ್ದಂತಹ ಸಂದರ್ಭ ಮಳೆಗಾಲದಲ್ಲಿ ಸೋರಿಕೆ ಉಂಟಾಗಿ ಸಿಬ್ಬಂದಿ ಬಹಳಷ್ಟು ಕಷ್ಟಪಟ್ಟಿದ್ದರು. ಇದನ್ನು ಮನಗಂಡು ಜಿಲ್ಲಾ ಪಂಚಾಯಿತಿನಿಂದ ಹೆಚ್ಚಿನ ಮುತುವರ್ಜಿ ವಹಿಸಿ ನವೀಕರಣಗೊಂಡ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುದೇಶ್ ಕುಮಾರ್ ದೇರೆಬೈಲ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪ.ಆರ್.ಶೆಟ್ಟಿ, ಗುತ್ತಿಗೆದಾರ ಮಾಧವ ಕಿನ್ಯಾ, ಬಿ.ಹೆಚ್.ಇ ಓ ಆದ ಜಯಂತಿ, ಆರೋಗ್ಯ ಕಾರ್ಯಕರ್ತೆ ಕುಸುಮ, ಹರಿಯಪ್ಪ ಸಾಲ್ಯಾನ್, ಮುನ್ನೂರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸುನೀತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.