Site icon Ullalavani

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ: ಬೋಳಿಯಾರ್

UN NETWORKS

ಉಳ್ಳಾಲ: ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ, ಅಧಿಕಾರ ವಹಿಸಿಕೊಂಡ ತಕ್ಷಣ ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರೈಸುವುದಾಗಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ.

ಅವರು ಮುನ್ನೂರು ಗ್ರಾಮ ಪಂಚಾಯಿತಿನ ಕಾಂಕ್ರೀಟಿಕರಣಗೊಂಡ ಭಂಡಾರಬೈಲಿನ ಶ್ರೀ ಪಂಜಂದಾಯ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಮೂಲಭೂತ ಸೌಕರ್ಯದ ಕೊರತೆಯ ಲಿಸ್ಟ್ ತಯಾರಿಸಿ ಅದಕ್ಕೆ ಅನುದಾನ ಮೀಸಲಿರಿಸಿ ಕಾಂಕ್ರೀಟಿಕರಣ ನಡೆಸಲಾಗಿದೆ. ಸೋಮೇಶ್ವರ ಜಿಲ್ಲಾ ಪಂಚಾಯಿತಿ ಬಹುದೊಡ್ಡ ವ್ಯಾಪ್ತಿಯನ್ನು ಪಡೆದುಕೊಂಡಿರುವುದರಿಂದ ವಿವಿದೆಡೆ ಅನುದಾನಗಳನ್ನು ಪೂರೈಸಲು ಅಸಾಧ್ಯವಾಗಿದೆ. ಆದರೂ ಸರಕಾರ ಕೈಂiÀiಲ್ಲಿ ಇಲ್ಲದಿದ್ದರೂ ವಿವಿಧ ಇಲಾಖೆಗಳಿಗೆ ಅಲೆದಾಡಿ ಗ್ರಾಮೀಣ ಪ್ರದೇಶಗಳ ಒಳರಸ್ತೆ ಕಾಂಕ್ರೀಟಿಕರಣ ನಡೆಸಿರುವ ಜಿಲ್ಲಾ ಪಂಚಾಯಿತಿ ಸದಸ್ಯೆ ಕಾರ್ಯ ಶ್ಲಾಘನೀಯ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಗ್ರಾಮದ ಅವ್ಯವಸ್ಥೆಯನ್ನು ಮನಗಂಡು ಪಂಚಾಯಿತಿ ಸದಸ್ಯರು ಸುಸಜ್ಜಿತ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ತಮ್ಮ ಕಾರ್ಯವೈಖರಿಯಿಂದ ಜಿಲ್ಲಾ ಪಂಚಾಯಿತಿನಲ್ಲಿ ಸೋಮೇಶ್ವರದ ಸದಸ್ಯೆ ಮಾದರಿ ಸದಸ್ಯೆ ಎಂದು ಹೆಸರು ಪಡೆದುಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮೂಲಕ ಬಹುತೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪ.ಆರ್.ಶೆಟ್ಟಿ, ಉಪಾಧ್ಯಕ್ಷ ಹರೀಶ್ ಭಂಡಾರಮನೆ, ಗುತ್ತಿಗೆದಾರ ಮಾಧವ ಕಿನ್ಯಾ, ಸದಸ್ಯರುಗಳಾದ ಕಿರಣ್ ಶೆಟ್ಟಿ, ವನಿತ ಯು.ಶೆಟ್ಟಿ, ಲೀಲಾವತಿ ಗೌಡ, ಹಾಗೂ ಸ್ಥಳೀಯರಾದ ಯೋಗೀಶ್, ಚೇತನ್, ಗಿರೀಶ್ ಕೊಟ್ಟಾರಿ, ಜಾರ್ಜ್ ಬಿಜೆಪಿ ಮುಖಂಡ ಹರಿಯಪ್ಪ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.

Exit mobile version