UN NETWORKS
ಉಳ್ಳಾಲ: ಮೂಲಭೂತ ಹಕ್ಕುಗಳಲ್ಲಿ ಮತದಾನದ ಹಕ್ಕು ಕೂಡಾ ಒಂದು. ವಿದ್ಯಾರ್ಥಿನಿಯರು ಮತದಾನ ಹಕ್ಕಿನ ಬಗ್ಗೆ ನಿರ್ಲಕ್ಷಿಸದೆ, 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿನಿಯರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತ ಚಲಾಯಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ನ್ಯಾಯವಾದಿ ಮತ್ತು ನೋಟರಿ ಚಂದ್ರಹಾಸ್ ಕೆ. ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಇಕ್ಬಾಲ್ ಅಹಮದ್ ಯು.ಟಿ., ನ್ಯಾಯವಾದಿ ಮಧುಸೂದನ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯವಿಭಾಗದ ಉಪನ್ಯಾಸಕಿ ಜಯಶ್ರೀ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಸಂಧ್ಯಾ ವಂದಿಸಿದರು.