Site icon Ullalavani

ಪ್ರಥಮ ಚಿಕಿತ್ಸೆಯ ಸಾಮನ್ಯ ಜ್ಞಾನ ಅಗತ್ಯ : ಡಾ| ಸಯ್ಯದ್ ಹನನ್

UN NETWORKS

ಉಳ್ಳಾಲ: ಪ್ರತೀ ನಾಗರಿಕರಲ್ಲಿ ತುರ್ತು ಚಿಕಿತ್ಸೆಯ ಬಗ್ಗೆ ಅರಿವು ಮೂಡಿದಲ್ಲಿ ಎಷ್ಟೋ ಪ್ರಾಣಗಳನ್ನು ಉಳಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳಲ್ಲಿ ಪ್ರಥಮ ಚಿಕಿತ್ಸೆಯ ಕುರಿತು ಸಾಮಾನ್ಯ ಜ್ಞಾನ ಮೂಡಬೇಕು ಎಂದು ಕಣಚೂರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ತಜ್ಞ ವೈದ್ಯ ಡಾ| ಸಯ್ಯದ್ ಹನನ್ ಅಭಿಪ್ರಾಯಪಟ್ಟರು.

ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಸಯನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸಾ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಭಾಗವಾಗಿ ಜ್ವರ, ಹಾವು ಕಚ್ಚಿದಾಗ, ತಲೆಸುತ್ತು ಬಂದಾಗ, ಹೃದಯಾಘಾತವಾದಾಗ, ವಿಷಜಂತು ಕಚ್ಚಿದಾಗ, ಮಕ್ಕಳಿಗೆ ವಾಂತಿ ಆದಾಗ, ಮಕ್ಕಳು ಮತ್ತು ದೊಡ್ಡವರ ಗಂಟಲಲ್ಲಿ ಘನವಸ್ತು ಸಿಕ್ಕಿಹಾಕಿಕೊಂಡಾಗ ಜೀವರಕ್ಷಿಸಲು ಮಾಡಬೇಕಾದ ಪ್ರಥಮ ಚಿಕಿತ್ಸಾ ವಿಧಾನವನ್ನು ಪ್ರಯೋಗಾತ್ಮಕವಾಗಿ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಕಲಿಸಿಕೊಟ್ಟರು. ಸಮಾಜಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.

ಕಣಚೂರು ಆಸ್ಪತ್ರೆಯ ನರ್ಸಿಂಗ್ ವಿಭಾಗದ ಸ್ವಾತಿ ಮತ್ತು ಆರ್ಯ ಕಾರ್ಯಕ್ರಮ ಸಂಯೋಜಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ನಜ್ಮುನ್ನೀಸ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ತಫ್‍ಸೀಯಾ ಎಂ. ಕೆ. ವಂದಿಸಿದರು.

Exit mobile version