Site icon Ullalavani

ಕುಂಪಲ ಶ್ರೀ ಬಾಲಕೃಷ್ಣ ಭಜನಾ ಮಂದಿರದ ಆಹ್ವಾನ ಪತ್ರಿಕೆ ಬಿಡುಗಡೆ

UN NETWORKS

ಉಳ್ಳಾಲ: ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ ಧಾರ್ಮಿಕ ನಂಬಿಕೆಗೆ ಹೆಚ್ಚಿನ ಒತ್ತನ್ನು ನಗರಭಜನೆ ಕಾರ್ಯಕ್ರಮದ ಮೂಲಕ ನೀಡುವ ಕೆಲಸವಾಗುತ್ತಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಅವರು ಕುಂಪಲ ಶ್ರೀ ಬಾಲಕೃಷ್ಣ ಭಜನಾ ಮಂದಿರದಲ್ಲಿ ಮಾ.24 ಹಾಗೂ 25ರವರೆಗೆ ನಡೆಯಲಿರುವ ಏಕಾಹ ಭಜನೋತ್ಸವ, ಪ್ರತಿಷ್ಠಾ ಮಹೋತ್ಸವ, ಸಾಮೂಹಿಕ ತುಳಸಿ ಅರ್ಚನೆ ಹಾಗೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಬಿಡುಗಡೆ ಮತ್ತು ನಗರಭಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕುಂಪಲದ ಶ್ರೀ ಬಾಲಕೃಷ್ಣ ಭಜನಾ ಮಂದಿರ ನಿರಂತರವಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮಾಡುತ್ತಿದೆ. ಏಕಾಹ ಭಜನಾ ಕಾರ್ಯಕ್ರಮದ ನಿಮಿತ್ತ ಒಂಭತ್ತು ದಿನಗಳ ಕಾಲ ಕುಂಪಲ ವ್ಯಾಪ್ತಿಯಲ್ಲಿ ನಗರಭಜನೆ ನಡೆಯಲಿದೆ. 1,200 ಮನೆಗಳಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾ.24 ರಂದು ಏಕಾಹ ಭಜನಾ ಹಾಗೂ ಮಾ.25 ರಂದು ಮಹಾಪೂಜೆ ಹಾಗೂ ಮಂದಿರದ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದರು.

ಮಹಾಪೋಷಕರಾದ ಕೇಶವದಾಸ್ ಬಗಂಬಿಲ, ಪ್ರ.ಕಾ ರವೀಂದ್ರ ಕುಂಪಲ, ಅರ್ಚಕ ಉಗ್ಗಪ್ಪ ಟೈಲರ್, ಆಡಳಿತ ಮಂಡಳಿ ಸದಸ್ಯರುಗಳಾದ ಪ್ರವೀಣ್.ಯಸ್.ಕುಂಪಲ, ಮಾಧವ ಬಂಗೇರ, ವೆಂಕಟೇಶ್ ಕುಂಪಲ, ಸಂಜೀವ ಕುಲಾಲ್, ಚಂದ್ರಶೇಖರ್ ಬಿ.ಜೆ, ಹರೀಶ್ ಮೂರುಕಟ್ಟೆ, ಪ್ರವೀಣ್ ಕುಲಾಲ್, ವೆಂಕಟಗಿರಿ, ಯಶವಂತ ಹನುಮಾನನಗರ, ದೇವಪ್ಪ ಮೂರುಕಟ್ಟ, ಪುರುಷೋತ್ತಮ ರಾವ್, ಗಣೇಶ್ ಹನುಮಾನ್ ನಗರ, ಗೋಪಾಲಕೃಷ್ಣ ರಾವ್, ವಿಶ್ವನಾಥ್ ಕುಲಾಲ್, ನಾಗೇಶ್ ಎಂ.ಆರ್, ಶಿವಾನಂದ ಟೈಲರ್, ಗಣೇಶ್.ಎಂ, ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.

Exit mobile version