ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಖುತುಬುಝ್ಜಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ.)ತಂಙಳ್‍ರವರ 423ನೇ ವಾರ್ಷಿಕ ಮತ್ತು 20ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಕಾರ್ಯಕ್ರಮ ಎ. 2ರಿಂದ 26ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ದರ್ಗಾ ವಠಾರದಲ್ಲಿರುವ ತಾಜುಲ್ ಉಲಮಾ ವೇದಿಕೆಯಲ್ಲಿ ಜರಗಲಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಹೇಳಿದರು.
ಮಂಗಳವಾರ ದರ್ಗಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎ. 2ರಂದು ಗುರುವಾರ ಬೆಳಿಗ್ಗೆ 11ಗಂಟೆಗೆ ನವೀಕೃತ ಮಸೀದಿ ಉದ್ಘಾಟನೆಯು ಉಳ್ಳಾಲ ಖಾಝಿ ಅಸ್ಸಯ್ಯದ್ ಪಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ದರ್ಗಾ ಝಿಯಾರತ್, ತಾಜುಲ್ ಉಲಮಾ ಅನುಸ್ಮರಣೆ, ತಹ್ಲೀಲ್ ಮತ್ತು ಖತಮುಲ್ ಕುರ್‍ಆನ್ ಸಮರ್ಪಣೆ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮದಲ್ಲಿ ಸೆಯ್ಯಿದ್ ಆಟಕೋಯ ತಂಙಳ್ ದುವಾ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಏಳು ಗಂಟೆಗೆ ಉರೂಸ್ ಕಾರ್ಯಕ್ರಮದ ಉದ್ಘಾಟನೆ ಮತ್ತು ತಾಜುಲ್ ಉಲಮಾ ಪ್ರಶಸ್ತಿ ಪ್ರದಾನ ಸಮಾರಂಭ ಉಳ್ಳಾಲ ಖಾಝಿ ಅಸ್ಸಯ್ಯದ್ ಪಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಅಸಯ್ಯಿದ್ ಉಮರುಲ್ ಫಾರೂಕ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಉಪದೇಶ ನೀಡಲಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಎ. 3 ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ನ್ಯಾಷನಲ್ ಇಂಟರ್ ಗ್ರೇಶನ್ ಕಾನ್‍ಫರೆನ್ಸ್‍ನ್ನು ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾಜಿ ಉದ್ಘಾಟಿಸಲಿದ್ದಾರೆ. ಎ. 4ರಂದು ಮಧ್ಯಾಹ್ನ ಎಲೈಟ್ ಮೀಟ್ (ದ.ಕ. ಜಿಲ್ಲಾ ಅಧಿಕಾರಿಗಳ ಸಭೆ) ಬಳಿಕ ಸಂಜೆ ನಾಲ್ಕು ಗಂಟೆಗೆ ನ್ಯಾಷನಲ್ ಸ್ಟೂಡೆಂಟ್ ಸಮ್ಮಿಟ್, .ಎ. 5 ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ದ.ಕ. ಜಿಲ್ಲಾ ಜಮಾಅತ್ ಪ್ರತಿನಿ„ ಸಮಾವೇಶ ನಡೆಯಲಿದೆ. ಎ. 7ರಂದು ಮಂಗಳವಾರ ಮಧ್ಯಾಹ್ನ ಎರಡು ಗಂಟೆಗೆ ನಡೆಯಲಿರುವ ಸುನ್ನಿ ಇಜ್ತಿಮಾ ಕಾರ್ಯಕ್ರಮದಲ್ಲಿ ಗುಜರಾತ್‍ನ ಹಜ್ ಸಮಿತಿ ಚೇರ್‍ಮೆನ್ ಸೂಫಿಎಂ.ಕೆ.ಚಿಸ್ತಿ ವಿಚಾರ ಮಂಡಿಸಲಿದ್ದಾರೆ ಎಂದು ನುಡಿದರು.
ಎ. 8ರಂದು ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ಸೆಯ್ಯಿದ್ ಮದನಿ ನ್ಯಾಷನಲ್ ಪೀಸ್ ಕಾನರೆನ್ಸ್ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಅಬ್ದುಲ್ ರಶೀದ್ ಝೈನಿ ಸೇರಿದಂತೆ ವಿವಿಧ ಧರ್ಮಗಳ ಧಾರ್ಮಿಕ ನೇತಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎ. 11ರಂದು ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತರ್ ರಾಜ್ಯ ಮಟ್ಟದ ಬುರ್ದಾ ಆಲಾಪನೆ ಸ್ಪರ್ಧೆ ನಡೆಯಲಿದೆ.
ಎ. 12ರಂದು ಭಾನುವಾರ 2.30ಕ್ಕೆ ಸನದುದಾನ ಮಹಾ ಸಮ್ಮೇಳನವು ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್‍ರವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಅಸಯ್ಯಿದ್ ಇಸ್ಮಾಯಿಲ್ ಬುಖಾರಿ ತಂಙಳ್ ಕಿರಾಅತ್ ಪಠಿಸಲಿದ್ದು, ಕಾರ್ಯಕ್ರಮವನ್ನು ಅಸ್ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್ ಅಲ್ ಬುಖಾರಿ ಕಡಲುಂಡಿ ಉದ್ಘಾಟಿಸಲಿದ್ದಾರೆ. ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಸ್ವಾಗತಿಸಲಿದ್ದು, ಉಳ್ಳಾಲ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಶೈಖುನಾ ತಾಯಕೋಡ್ ಅಬ್ದುಲ್ಲ ಮುಸ್ಲಿಯಾರ್ ಸನದುದಾನ ಭಾಷಣ ಮಾಡಲಿದ್ದು, ಮುಖ್ಯ ಭಾಷಣಗಾರರಾಗಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮತ್ತು ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಗವಹಿಸಲಿದ್ದಾರೆ.
ಎ. 14ರಂದು ಮಂಗಳವಾರ ಬೆಳಿಗ್ಗೆ 8.00ಗಂಟೆಗೆ ಮದನಿ ಹಿಫ್ಲುಲ್ ಕಾಲೇಜು ವಿದ್ಯಾರ್ಥಿಗಳಿಂದ ಮುಸಾಬಕತುಲ್ ಫುರ್ಖಾನಿಯ್ಯ, ಎ. 16ರಂದು ಮಧ್ಯಾಹ್ನ 2.00ಗಂಟೆಗೆ ಮದನಿ ಸಂಗಮ, ಎ. 18ಶನಿವಾರ ಬೆಳಿಗ್ಗೆ 8.00ಗಂಟೆಗೆ ಸೆಯ್ಯಿದ್ ಮದನಿ ದಅïವಾ ಕಾಲೇಜು ವಿದ್ಯಾರ್ಥಿಗಳ ದಅïವಾ ಫೆಸ್ಟ್, ಸಂಜೆ ನಾಲ್ಕು ಗಂಟೆಗೆ ನ್ಯಾಷನಲ್ ದಅïವಾ ಕಾನ್‍ಫರೆನ್ಸ್ , ಎ. 20ರಂದು ಸೋಮವಾರ ಮಧ್ಯಾಹ್ನ 2.00 ಗಂಟೆಗೆ ಸಾದಾತ್ ಸಂಗಮ, ಎ. 22ರಂದು ಮಧ್ಯಾಹ್ನ 2.00 ಗಂಟೆಗೆ ಮುಅಲ್ಲಿಂ ಸಮಾವೇಶ ಮತ್ತು ಎಸ್.ಎಂ.ತಂಙಳ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಎ. 23ರಂದು ಗುರುವಾರ ಸಂಜೆ 4.30ಕ್ಕೆ ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್‍ರವರ ಅಧ್ಯಕ್ಷತೆಯಲ್ಲಿ ನಡೆಯಲಿರುದ ಧಾರ್ಮಿಕ ಉಪನ್ಯಾಸದ ಸಮಾರೋಪ ಸಮಾರಂಭವನ್ನು ಎ.ಪಿ. ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್ ಮುಖ್ಯ ಭಾಷಣ ಮಾಡಲಿದ್ದಾರೆ. ಎ. 24 ಶುಕ್ರವಾರ ಸಂಜೆ 4.30ಕ್ಕೆ ರಾಜಕೀಯ ಮತ್ತು ಸಾಮಾಜಿಕ ಸಮಾವೇಶ ದರ್ಗಾ ಅಧ್ಯಕ್ಷ ಯು. ಎಸ್. ಹಂಝ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದರ್ಗಾದ ಡೊಕ್ಯುಮೆಂಟರಿ ಸಿ.ಡಿ.ಯನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಕಾನೂನು ಸಚಿವ ಸದಾನಂದಗೌಡ, ಸಂಸದರಾದ ಮಲ್ಲಿಕಾರ್ಜುನಖರ್ಗೆ, ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ಕರ್ನಾಟಕ ಸರ್ಕಾರದ ಗೃಹ ಸಚಿವ ಕೆ.ಆರ್. ಜಾರ್ಜ್, ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ವಕ್ಪ್ ಸಚಿವ ಖಮರುಲ್ ಇಸ್ಲಾಂ, ಹಜ್ಜ್ ಮತ್ತು ವಾರ್ತಾ ಸಚಿವ ರೋಶನ್ ಬೇಗ್, ವಸತಿ ಸಚಿವ ಅಂಬರೀಶ್, ಮೀನುಗಾರಿಕೆ ಮತ್ತು ಯುವಜನ ಸೇವೆ ಸಚಿವ ಅಭಯಚಂದ್ರ ಜೈನ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡುರಾವ್, ಮಾಜಿ ಕೇಂದ್ರ ಸಚಿವರುಗಳಾದ ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡೀಸ್, ವೀರಪ್ಪ ಮೊಯಿಲಿ, ಶಾಸಕರುಗಳಾದ ಎಸ್. ಅಂಗಾರ, ವಸಂತ ಬಂಗೇರ, ಮೊಯ್ದಿನ್ ಬಾವಾ, ಜೆ.ಆರ್.ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್‍ನ ಅಧ್ಯಕ್ಷ ಡಾ. ಮೊಹಮ್ಮದ್ ಯೂಸುಫ್, ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯ ಸಿಇಒ ಎ.ಎಸ್.ಜೀಲಾನಿ, ಕರ್ನಾಟಕ ಹಜ್ ಕಮಿಟಿಯ ಚೇರ್‍ಮೇನ್ ಎಂ.ಎಂ. ಅಹ್ಮದ್, ಮಂಗಳೂರು ನಗರಾಭಿವೃದ್ಧಿ ಪ್ರಾ„ಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಯೆನೆಪೋಯ ಸಮೂಹ ಸಂಸ್ಥೆಗಳ ಕುಲಪತಿ ವೈ. ಅಬ್ದುಲ್ಲ ಕುಂಞÂ, ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್‍ನ ಸದಸ್ಯ ಎನ್.ಕೆ.ಎಂ. ಶಾಫಿ ಸಅದಿ ಸೇರಿದಂತೆ ಧಾರ್ಮಿಕ ಸಾಮಾಜಿಕ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.
ಎ.25ರಂದು ಸಂದಲ್ ಮೆರವಣಿಗೆ, ಬುರ್ದಾ ಮಜ್ಲಿಸ್ ನಡೆಯಲಿದ್ದು. ಎ.26ರಂದು ಅನ್ನದಾನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಪ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್,ಜೊತೆ ಕಾರ್ಯದರ್ಶಿ ಮಹಮ್ಮದ್ ಅಶ್ರಫ್, ಫಾರೂಕ್ ಮಾರ್ಗತ್ತಲೆ, ಮಹಮ್ಮದ್ ಹಾಜಿ ಹಾಗೂ ಆಡಿಟರ್ ಜೆ. ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.