UN NETWORKS
ಉಳ್ಳಾಲ: ಸತತ ಪ್ರಯತ್ನದೊಂದಿಗೆ ಎಲ್ಲರ ಸಹಕಾರ ಇದ್ದರೆ ಯಾವುದೇ ಕಾರ್ಯ ನಿರ್ವಿಘ್ನವಾಗಿ ನಡೆಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಅನ್ನದಾನಂದಹ ಮಹಾತ್ಕಾರ್ಯಕ್ಕೆ ಅನ್ನಛತ್ರ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಳ್ಳಾಲ ವಲಯ ಮೇಲ್ವಿಚಾರಕಿ ಲತಾ ಅಭಿಪ್ರಾಯಪಟ್ಟರು.
ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶ್ರೀ ಕ್ಷೇತ್ರದ ಅನ್ನಛತ್ರಕ್ಕೆ ಪೂಜ್ಯ ಖಾವಂದರು 2ಲಕ್ಷ ರೂ. ನೀಡಿದ್ದಾರೆ ಎಂದ ಅವರು ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅಬಿವೃದ್ಧಿಪರ ಕಾರ್ಯಗಳು ಈ ವ್ಯಾಪ್ತಿಯಲ್ಲಿ ನಡೆದಿದೆ ಎಂದರು.
ಉಳ್ಳಾಲ ಫಿಶ್‍ಮಿಲ್ ಅಸೋಸಿಯೆಸನ್‍ನ ಅಧ್ಯಕ್ಷ ಖಾದರ್ ಎಚ್.ಕೆ. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ದಯಾನಂದ್ ಚಂದನ್ ಗುರಿಕಾರ. ಉಪಾಧ್ಯಕ್ಷ ಸುರೇಂದ್ರ ಪುತ್ರನ್ ಗುರಿಕಾರ, ಪ್ರಧಾನ ಕಾರ್ಯದರ್ಶಿ ಶಂಕರ ಬಂಗೇರ, ಕೋಶಾಧಿಕಾರಿ ಸುನಾಕ್ಷ ಕೋಟ್ಯಾನ್ ಗುರಿಕಾರ, ಜತೆ ಕಾರ್ಯದರ್ಶಿ ರಾಜೇಶ್ ಪುತ್ರನ್, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಶಾಲಾ ಮಾಜಿ ಸಂಚಾಲಕ ಬಾಬು ಬಂಗೇರ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಸುಭಾಷ್ ಪೂಜಾರಿ, ಶ್ರೀ ಗುಳಿಗ ಪಾತ್ರಿ ಹರಿಶ್ಚಂದ್ರ ಪೂಜಾರಿ, ಮಖ್ಯಸ್ಥರಾದ ಗಂಗಾಧರ ಸುವರ್ಣ, ವಿಠಲ ಸುವರ್ಣ ಗುರಿಕಾರ, ಬಾಸ್ಕರ ಬಂಗೇರ ಗುರಿಕಾರ, ಸುರೇಂದ್ರ ಕರ್ಕೇರ ಗುರಿಕಾರ, ಬಾಬು ಪುತ್ರನ್ ಗುರಿಕಾರ, ವಸಂತ ಅಮೀನ್ ಗುರಿಕಾರ, ಕಾರ್ಯಕಾರಿ ಸಮಿತಿಯ ನಿತ್ಯಾನಂದ ಕರ್ಕೇರ, ದಾಮೋದರ ಸಾಲ್ಯಾನ್, ರೋಹಿದಾಸ್ ಬಂಗೇರ, ಸತೀಶ್ ಪುತ್ರನ್, ಕಾಶಿನಾಥ್ ಪುತ್ರನ್, ಸುರೇಶ್ ಕೋಟ್ಯಾನ್, ರಾಜ ಪುತ್ರನ್, ಯಶವಂತ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.