UN NETWORKS
ಪಾವೂರು: ಪಾವೂರು-ಹರೇಕಳದ ನಾಗಮೂಲೆ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕೋರ್ದಬ್ಬು, ತನ್ನಿಮಾನಿಗ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಗುರುವಾರ ಆರಂಭಗೊಂಡಿದ್ದು ಮಾ. 12ರ ತನಕ ನಡೆಯಲಿದೆ.
ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದಿಂದ ದೈವಸ್ಥಾನದವರೆಗೆ ನಡೆದ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಂದಿರದ ಕೋಶಾಧಿಕಾರಿ ನಾರಾಯಣ ಪೂಜಾರಿ, ಕಾರ್ಯದರ್ಶಿ ಜನಾರ್ದನ ಹರೇಕಳ, ಪ್ರಮುಖರಾದ ಪದ್ಮನಾಭ ಪೂಜಾರಿ ಖಂಡಿಗ, ಕೃಷ್ಣಪ್ಪ ನಾಗಮೂಲೆ, ಸತ್ಯಪಾಲ ರೈ ಕಡೆಂಜ, ರವಿ ಅಸೈಗೋಳಿ, ನವೀನ್ ಕೊಣಾಜೆ, ವಾಮನ್‍ರಾಜ್ ಪಾವೂರು, ಪ್ರೇಮ್‍ರಾಜ್ ಪಾವೂರು, ಪವಿತ್ರ ಕೆರೆಬೈಲ್, ಸಂಜೀವ ನಾಗಮೂಲೆ, ಗಣೇಶ ಪಂಜಿಮಾಡಿ, ಚೇತನಾ ಫ್ರೆಂಡ್ಸ್, ಬಬ್ಬುಸ್ವಾಮಿ ಸೇವಾ ಸಮಿತಿ, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.