Site icon Ullalavani

ಅಂಬಟಡಿ ರಸ್ತೆ 15 ವರ್ಷಗಳ ಬೇಡಿಕೆ ಈಡೇರಿಕೆ : ಯು.ಟಿ.ಖಾದರ್

UN NETWORKS

ಉಳ್ಳಾಲ : ಕಲ್ಲಾಪು ಅಂಬಟಡಿಯ ರಸ್ತೆ ನಿರ್ಮಾಣ 15 ವರ್ಷಗಳ ಬೇಡಿಕೆಯಾಗಿತ್ತು. ಜನರ ಬೇಡಿಕೆಗಳಿಗೆ ಅನುಗುಣವಾಗಿ ರಸ್ತೆ ನಿರ್ಮಾಣದೊಂದಿಗೆ ಕಾಂಕ್ರಿಟೀಕರಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ಅಂಬಟಡಿ ರಸ್ತೆ 78 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ, ಚರಂಡಿ ರಚನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ, ಅಧ್ಯಕ್ಷ ಹುಸೈನ್ ಕುಂಇಮೋನು, ಉಪಾಧ್ಯಕ್ಷೆ ಚಿತ್ರಾಚಂದ್ರಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜೇನ್‍ಶಾಂತಿ ಡಿ.ಸೋಜ ಸದಸ್ಯರಾದ ಉಸ್ಮಾನ್ ಕಲ್ಲಾಪು, ಪೆÇಡಿಮೋನು, ನಾಮನಿರ್ದೇಶನ ಸದಸ್ಯರಾದ ರಿಚ್ಚಾರ್ಡ್, ರವಿ ಕಾಪಿಕಾಡ್, ಅಭಿಯಂತರರಾದ ರೇಣುಕಾ , ಕಾಮತ್, ಇಲಿಯಾಸ್, ಡೆನ್ನಿಸ್ ಡಿ.ಸೋಜ, ಕುಂಇಮೋನು ಉಪಸ್ಥಿತರಿದ್ದರು.
ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಯು.,ಎಚ್. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version