Site icon Ullalavani

ಆಕ್ಟಿವಾ ಅಪಘಾತ: ಇಬ್ಬರು ಬಾಲಕರು ಬಲಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ : ಆಕ್ಟಿವಾ ಸ್ಕೂಟರ್ ಅಪಘಾತಕ್ಕೀಡಾಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ಮೊಂಟೆಪದವು ಬಳಿ ಸಂಭವಿಸಿದೆ.

ಮೊಂಟೆಪದವು ನಿವಾಸಿಗಳಾದ ತಮೀಮ್ (14) ಮತ್ತು ಝಾಕೀರ್ (14 ) ಮೃತ ದುರ್ದೈವಿಗಳು.

ಮೃತ ಇಬ್ಬರು ಅಲ್- ಮದೀನಾ ಮಂಜನಾಡಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.

ಮೊಂಟೆಪದವಿನಿಂದ ಮಂಜನಾಡಿಗೆ ತಮೀಮ್ ತನ್ನ ತಂದೆಯ ಆಕ್ಟಿವಾ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಆಕ್ಖಿವಾ ರಸ್ತೆ ಬದಿಯ ಹೊಂಡಕ್ಕೆ ಬಿದ್ದು ತಮೀಮ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಝಾಕೀರ್ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version