Site icon Ullalavani

ಪಾವೂರು ಪಂಚಾಯತ್ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

UN NETWORKS

ಪಾವೂರು : ಹಕ್ಕುಪತ್ರ ನೀಡುವ ಐತಿಹಾಸಿಕ ಕಾನೂನು ಜಾರಿಗೊಳಿಸಿದ ರಾಜ್ಯ ಸರಕಾರದ ಜನಪರ ಕಾಳಜಿಯಿಂದಾಗಿ 15 ವರ್ಷಗಳಿಂದ ಆತಂಕದಲ್ಲಿ ಜೀವನ ನಡೆಸುತ್ತಿದ್ದ ಗ್ರಾಮೀಣ ಭಾಗದ ಜನತೆ ಧೈರ್ಯದಿಂದ ಬಾಳುವಂತಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಪಾವೂರು ಗ್ರಾಮ ಪಂಚಾಯತ್ ಇಲ್ಲಿ ನಿರ್ಮಾಣವಾದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ, ಹಕ್ಕು ಪತ್ರ ವಿತರಣೆ, ಸರಕಾರದ ವಿವಿಧ ಸವಲತ್ತುಗಳ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದಿನ ಮೂರು ಸರಕಾರ ಆಡಳಿತ ನಡೆಸುವ ಸಂದರ್ಭ ಅಧಿವೇಶನದಲ್ಲಿ ಹಕ್ಕು ಪತ್ರ ನೀಡುವ ಕುರಿತು ಪ್ರಸ್ತಾಪಿಸಿದ್ದೆ. ಆದರೆ ಅಧಿಕಾರ ಹಂಚಿಕೆಯಲ್ಲೇ ಸರಕಾರ ಕಾಲ ಕಳೆಯುವ ನಡುವೆ ಜನರ ಕುರಿತು ಯೋಜನೆಗಳ ಅರಿವು ಅವರಿಗಿರಲಿಲ್ಲ. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಅನ್ನಭಾಗ್ಯ, ಆಶ್ರಯಯೋಜನೆ ಸಾಲ ಮನ್ನಾ, ಭಾಗ್ಯಲಕ್ಷ್ಮೀ ಯೋಜನೆ ಹಾಗೂ ಕ್ಷೀರಭಾಗ್ಯ ಯೋಜನೆಗಳನ್ನು ಪ್ರಥಮವಾಗಿ ಜಾರಿಗೊಳಿಸಿತ್ತು. ತದನಂತರ ಹಕ್ಕುಪತ್ರ ವಿತರಣೆ ಕುರಿತು ನ್ಯಾಯಾಲಯದಲ್ಲಿ ಇದ್ದಂತಹ ದಾವೆಗಳಲ್ಲಿ ಹೋರಾಡಿ , ಕಾನೂನು ಸಡಿಲೀಕರಣಗೊಳಿಸಿ ಹಕ್ಕುಪತ್ರ ನೀಡುವ ಕ್ರಾಂತಿಯನ್ನು ಮಾಡಿತು. ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ 10,500 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದರಿಂದ ಪ್ರತಿ ಮನೆಯಲ್ಲಿರುವ 45,000 ಮಂದಿ ನೆಮ್ಮದಿಯ ಜೀವನ ನಡೆಸುವರಂತಾಗಿದ್ದಾರೆ ಎಂದರು.

ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ ತಾಲೂಕಿನ ಸರ್ವಧರ್ಮದವರ ಸೇವೆ ಉದ್ದೇಶದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಲವು ವರ್ಷಗಳಿಂದ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡಿದ್ದೇನೆ. ಸ್ವ ಕ್ಷೇತ್ರವನ್ನು ಕುಟುಂಬದಂತೆ ನೋಡಿಕೊಳ್ಳುತ್ತಿರುವ ಸಚಿವ ಖಾದರ್ ಅವರ ಕಾರ್ಯವೈಖರಿ ಇತರರಿಗೂ ಮಾದರಿ ಎಂದರು.
ಪಾವೂರು ಇನೋಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ರಾವ್, ಪಾವೂರು ಅರಸ್ತಾನ ಅಲ್ – ಮುಬಾರಕ್ ಜುಮಾ ಮಸೀದಿ ಖತೀಬರಾದ ರಿಯಾಝ್ ಫೈಝಿ, ಉಳಿಯ ಇನ್ಫೆಂಟ್ ಜೀಸಸ್ ಚಚ್ ್ನ ಧರ್ಮಗುರು ಫಾ| ಜೆರಾಲ್ಡ್ ಲೋಬೊ ಗೌರವ ಉಪಸ್ಥಿತರಿದ್ದರು.

ನೀರುಮಾರ್ಗ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಸೀಮಾ ಮೆಲ್ವಿನ್ ಡಿಸೋಜ, ಪಾವೂರು ಗ್ರಾ.ಪಂ ಅಧ್ಯಕ್ಷ ಫಿರೋಝ್ ಮಲಾರ್, ಉಪಾಧ್ಯಕ್ಷೆ ಲೀಲಾವತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ರಾಜ್ಯ ಆಹಾರ ಭದ್ರತಾ ಸಮಿತಿಯ ಟಿ.ಎಸ್.ಅಬ್ದುಲ್ಲಾ, ಭೂ ನ್ಯಾಯ ಮಂಡಳಿ ಸದಸ್ಯ ಸುದರ್ಶನ್ ಶೆಟ್ಟಿ, ಕೆಡಿಪಿ ಸದಸ್ಯ ಪದ್ಮನಾಭ ನರಿಂಗಾನ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಖಾದಿ ಬೋರ್ಡ್  ಸದಸ್ಯ ಎಸ್.ಅಬ್ಬಾಸ್ ಸಜಿಪ, ಪಶುಭಾಗ್ಯ ಸಮಿತಿ ಅಧ್ಯಕ್ಷ ಬಿ.ಉಗ್ಗಪ್ಪ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಯೂಸುಫ್ ಬಾವಾ, ಪಿಯೂಸ್ ಮೊಂತೇರೊ, ಅಕ್ರಮ ಸಕ್ರಮ ಸಮಿತಿಯ ಸಿದ್ದೀಖ್ ಪಾರೆ, ಕೆಎಸ್ ಆರ್ ಟಿಸಿ ನಿಗಮ ನಿರ್ದೇಶಕ ರಮೇಶ್ ಶೆಟ್ಟಿ, ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಹಮ್ಮದ್ ಕುಂಞ ನಕ್ಕರೆ, ಮೆಸ್ಕಾ ಸಲಹಾ ಸಮಿತಿ ಸದಸ್ಯ ಪ್ರಭಾಕರ ಶೆಟ್ಟಿ, ಪಶುಭಾಗ್ಯ ಸಮಿತಿ ಸದಸ್ಯ ಸದಾಶಿವ, ವಕ್ಫ್ ಸಲಹಾ ಸಮಿತಿ ಸದಸ್ಯ ಸುಲೈಮಾನ್, ಉಸ್ಮಾನ್ ಕೆ.ಸಿ.ರೋಡ್, ಅಬುಸಾಲಿ ಅಂಬ್ಲಮೊಗರು, ಆರಾಧನಾ ಸಮಿತಿ ಸದಸ್ಯ ದಿನೇಶ್ ಪೂಜಾರಿ, ಗೋಪಾಲ್, ಆರಾಧನಾ ಸಮಿತಿಯ ಶೋಭಾ ಶೆಟ್ಟಿ, ಸೀತಾ ನಾಯ್ಕ್, ಮೆಸ್ಕಾಂ ಸಲಹಾ ಸಮಿತಿಯ ಲೀಲಾ ಲಿಂಗಪ್ಪ, ಇಬ್ರಾಹಿಂ ಖಲೀಲ್ ಪಟ್ಟೋರಿ, ಮಹಮ್ಮದ್ ಅಡ್ಕರೆಪಡ್ಪು, ಮೊಯ್ದೀನ್ ಕುಂಞ, ಖಾದರ್ ಬೈತಾರ್, ಸೀತಾರಾಮ ಸಾಲ್ಯಾನ್, ಪದ್ಮನಾಭ ಮುಟ್ಟಿಂಜ, ಮುರಳಿ ಶೆಟ್ಟಿ ಮೋರ್ಲ, ಸಾಧಿಕ್ ಉಳ್ಳಾಲ, ಸಂಪತ್ ಮಡ್ಯಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಬಿ.ಎನ್, ಗ್ರಾಮ ಲೆಕ್ಕಾಧಿಕಾರಿ ಶ್ವೇತಾ ಇವರನ್ನು ಸನ್ಮಾನಿಸಲಾಯಿತು.

Exit mobile version