Site icon Ullalavani

ಚೆಂಬುಗುಡ್ಡೆ ರಸ್ತೆಗೆ ಐವನ್ ಡಿ’ಸೋಜ ಶಿಲಾನ್ಯಾಸ

UN NETWORKS

ಉಳ್ಳಾಲ: ಸಚಿವ ಯು.ಟಿ. ಖಾದರ್ ಅವರ ಮಂಗಳೂರು ಕ್ಷೇತ್ರ ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ನಂಬರ್‍ವನ್ ಆಗಿದ್ದು, ಇಚ್ಚಾ ಶಕ್ತಿಯಿದ್ದರೆ ಯಾವುದೇ ಕ್ಷೇತ್ರ ಅಭಿವೃದ್ಧಿಯನ್ನು ಮಾಡಬಹುದು ಎನ್ನುವುದನ್ನು ಸಚಿವ ಖಾದರ್ ತೋರಿಸಿಕೊಟ್ಟಿದ್ದಾರೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ ಅಭಿಪ್ರಾಯಪಟ್ಟರು.

ಉಳ್ಳಾಲ ನಗರಸಭೆಯ ಚೆಂಬುಗುಡ್ಡೆ ವಾರ್ಡ್‍ಗೆ ಐವನ್ ಡಿ’ಸೋಜ ಅವರ ಅಲ್ಪಸಂಖ್ಯಾತ ನಿಧಿಯಡಿ ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಜನ ಸಾಮಾನ್ಯರ ಸೇವೆಗೆ ಜನಪ್ರತಿನಿಧಿಗಳು ಬದ್ಧರಾಗಬೇಕು. ಕಳೆದ ಮೂರು ವರ್ಷದ ವಿಧಾನ ಪರಿಷತ್‍ನ ಶಾಸಕ ಅವಧಿಯಲ್ಲಿ ಸುಮಾರು 25 ಕೋಟಿ ರೂ. ಅಧಿಕ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಿದ್ದೇನೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗಿರುವ ಬಡರೋಗಿಗಳಿಗೆ ಮುಖ್ಯಮಂತ್ರಿ ನಿಧಿಯಿಂದ ಕೋಟ್ಯಾಂತರ ರೂ. ಸಹಾಯ ಹಸ್ತವನ್ನು ನೀಡಲು ಸಾಧ್ಯವಾಗಿದೆ. ಮುಖ್ಯವಾಗಿ ತಮ್ಮ ಸೇವಾ ಅವಧಿಯಲ್ಲಿ ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಿದರೆ ಯಾವುದೇ ಕೆಲಸ ಅಸಾಧ್ಯ ಎನ್ನುವುದು ಇಲ್ಲ ಎಂದರು.

ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಸದಸ್ಯ ಭಾಝಿಲ್ ಡಿ.ಸೋಜ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಪಿಯೂಷ್ ಮೊಂತೇರೊ, ಪಿಲಾರ್ ಮದನಿ ಮಸ್ಜಿದ್ ಅಧ್ಯಕ್ಷ ಅಬೂಬಕ್ಕಾರ್ ಕೆ., ಉಸ್ತಾದ್ ಅಬೂಬಕ್ಕಾರ್ ಮದನಿ, ದರ್ಗಾ ಸಮಿತಿ ಸದಸ್ಯ ಅಬ್ಬಾಸ್, ಫಾರೂಕ್, ಯೂತ್ ಅಸೋಸಿಯೇಷನ್ ಅಧ್ಯಕ್ಷ ಇಕ್ಬಾಲ್, ಅಬ್ದುಲ್ ರಮೀಝ್, ಡೊಲ್ಪಿ ಡಿ.ಸೋಜ, ಜೇಮ್ಸ್ ಕರ್ಕೇರ, ಸಜ್ಜಾದ್, ಸಲಾಂ ಚೆಂಬುಗುಡ್ಡೆ, ಅಶ್ರಪ್ ಕೆರೆಬೈಲ್, ಅಶ್ಪಾಕ್ ಚೆಂಬುಗುಡ್ಡೆ, ಸಂಶುದ್ದಿನ್, ದೇವಕಿ ಉಮೇಶ್ ಬೋಳಾರ್, ಭಾರತಿ, ರೋಹಿಣಿ, ಸೈಫುದ್ದಿನ್ ಮತ್ತಿತರರು ಉಪಸ್ಥಿತರಿದ್ದರು.

Exit mobile version