Site icon Ullalavani

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕೆಸಿಎಫ್ ದಿನಾಚರಣೆ

UN NETWORKS

ಕುವೈತ್: ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ದಿನಾಂಕ 22/23 ಫೆಬ್ರವರಿ 2018 ರ ದ್ವಿದಿನ ಕೆಸಿಎಫ್ ದಿನಾಚರಣೆಯು ಬರಡಾದ ಮರುಭೂಮಿಯಲ್ಲಿ ಅನಿವಾಸಿ ಕನ್ನಡಿಗರ ಮಧ್ಯೆ ಧಾರ್ಮಿಕತೆಯ ಕಂಪನ್ನು ಬೀರುತ್ತಾ ಹೊಸ ಹುರುಪನ್ನು ಸೃಷ್ಟಿಸುತ್ತಾ ಧಾರ್ಮಿಕ , ಶೈಕ್ಷಣಿಕ , ಸಾಂತ್ವಾನಗಳಿಗೆ ಕೈ ಜೋಡಿಸುತ್ತಾ ರಾತ್ರಿ ಬೆಳಗಾಗುದರೊಳಗೆ ಯುವ ಜನಾಂಗದ ಮನಸ್ಸಿನ ಮನದಾಳದಲ್ಲಿ ಡಿಂಡಿಮವ ಬಾರಿಸುತ್ತಾ ಮುನ್ನುಗ್ಗಿದ ಕೆಸಿಎಫ್ ದಿನಾಚರಣೆಯು ಕುವೈತ್ ನಲ್ಲಿ ಮಾದರಿ ಕಾರ್ಯಕ್ರಮವಾಗಿ ಫೆಬ್ರವರಿ 22 ರಂದು ಇಶಾ ನಮಾಝ್ ನ ನಂತರ ಕೆಸಿಎಫ್ ರಾಷ್ಟ್ರೀಯ ಶೈಕ್ಷಣಿಕ ಕನ್ವೀನರ್ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರ ದುವಾದೊಂದಿಗೆ ಆರಂಭವಾಯಿತು.

ಕೆಸಿಎಫ್ ಕುವೈತ್ ಬುರ್ದಾ ತಂಡದಿಂದ ಬುರ್ದಾ ಆಲಾಪನೆ ನಡೆಯಿತು.ಕೆಸಿಎಫ್ ರಾಷ್ಟ್ರೀಯ ಸಂಘಟನಾ ಕನ್ವೀನರ್ ಝಕ್ರಿಯಾ ಆನೆಕಲ್ ಸ್ವಾಗತ ಭಾಷಣ ದಲ್ಲಿ ಕೆಸಿಎಫ್ ಬಗ್ಗೆ ತಿಳಿಸಿದರು.ಸ್ವಲ್ಪ ವಿರಾಮದ ನಂತರ Iಅಈ ಕುವೈತ್ ರಾಷ್ಟ್ರೀಯ ಕಾರ್ಯದರ್ಶಿ ಜನಾಬ್ ಅಬ್ದುಲ್ಲ ವಡಗರ ಅವರಿಂದ ಪ್ರವಾಸಿ ಜೀವನದಲ್ಲಿ ಸಂಘಟನೆಯ ಅವಶ್ಯಕತೆ ಎಂಬ ವಿಷಯದಬಗ್ಗೆ ತರಗತಿ ನಡಸಿಕೊಟ್ಟರು.

ನಂತರ ಇಹ್ಸಾನ್ ಮುಖ್ಯಸ್ಥರಾದ ಬಹುಮಾನ್ಯ ಇಸ್ಮಾಯಿಲ್ ಸಅದಿ ಕಿನ್ಯ ಮಾತನಾಡಿ ಉತ್ತರ ಕರ್ನಾಟಕದ ಇಹ್ಸಾನ್ ನಲ್ಲಿ ಕೆಸಿಎಫ್ ಪಾತ್ರ ಬಗ್ಗೆ ತಿಳಿಸಿದರು.Iಅಈ ಕುವೈತ್ ರಾಷ್ಟ್ರೀಯ ಉಪಾಧ್ಯಕ್ಷರಾದ ಸೈಯದ್ ಸೈದಲವಿ ಸಖಾಫಿ ಮಂಗಾಫ್ ತಂಙಳ್ ರವರು ಸ್ವಲಾತ್ ಮಜ್ಲಿಸ್ ಗೆ ನೇತ್ರತ್ವ ನೀಡಿದರು.ಹಾಗೂ ಅವರ ಭಕ್ತಿ ನಿರ್ಭಯ ದುವಾದೊಂದಿಗೆ ಪ್ರಥಮ ದಿನದ ಕಾರ್ಯಕ್ರಮ ಕೊನೆಗೊಂಡಿತು.ಹಾಗೂ ರಾತ್ರಿಯ ಭೂರಿ ಭೋಜನದೊಂದಿಗೆ ಎಲ್ಲರೂ ಅಲ್ಲೀಯೇ ನಿದ್ರೆ ಮಾಡಿ ಸುಬಹಿ ನಮಾಝ್ ನ ಮುಂಚೆಯೇ ಎದ್ದು ತಹಜ್ಜುದ್ ನಮಾಝ್ ಗೆ ಹತ್ತಿರದ ಮಸೀದಿಗೆ ಹೋಗಿ ಸುಬಹಿ ನಮಾಝ್ ನ ನಂತರ ದ್ವಿತೀಯ ದಿನದ ಕಾರ್ಯಕ್ರಮ ಸಭಾಅಧ್ಯಕ್ಷರಾದ ಬಹುಮಾನ್ಯ ಫಾರೂಕ್ ಸಖಾಫಿ ಉಸ್ತಾದರ ನೇತ್ರತ್ವದಲ್ಲಿ ಮಹಾತ್ಮರ ಹೆಸರಲ್ಲಿ ಖುರ್-ಆನ್ ಓದಿ ದುವಾ ಮಾಡಲಾಯಿತು. ನಂತರ ಕೆಸಿಎಫ್ ಕುವೈತ್ ಉಲಮಾ ಬಹುಮಾನ್ಯ ಬಾದುಷ ಸಖಾಫಿ ಉಸ್ತಾದರು ಸಂಘಟನೆಯ ಕಾರ್ಯಕರ್ತರು ದೈನಂದಿನ ಜೀವನದಲ್ಲಿ ಪಾಲಿಸಬೇಕಾದ ನೆಬಿ(ಸ.ಅ )ರವರ ಸುನ್ನತ್ ದಿನಚರಿ ಬಗ್ಗೆ ಸವಿಸ್ತಾರವಾಗಿ ಕಲಿಸಿಕೊಟ್ಟರು.

ಕುವೈತ್ ರಾಷ್ಟ್ರೀಯ ನಾಯಕರಾದ ಇಂಜೀನಿಯರ್ ಅಬುಬಕರ್ ಸಿದ್ದೀಕ್ ರವರು ಸಂಘಟನೆಯಲ್ಲಿ ನಾಯಕತ್ವ ದ ಬಗ್ಗೆ ತರಗತಿ ನೆಡೆಸಿಕೊಟ್ಟರು. ನಂತರ ಜನಾಬ್ ರಫೀಕ್ ಕೊಚನೂರು ಅವರು ಪ್ರವಾಸಿ ಜೀವನದಲ್ಲಿ ಹಣಕಾಸಿನ ಬಗ್ಗೆ ತರಗತಿ ನೆಡೆಸಿದರು. ಬೆಳಗ್ಗಿನ ಉಪಹಾರದ ನಂತರ ಕಾರ್ಯಕರ್ತರಿಗಾಗಿ ಆಟೋಟ ಸ್ಫರ್ದೆ,ಈಜು ಸ್ಫರ್ದೆಯೂ ಮಾನಸಿಕವಾಗಿ ಸಜ್ಜಾಗಳು ನಡೆಸಲಾಯಿತು.ಜುಮಾ ನಮಾಝ್ ನ ನಂತರ ಮೃಷ್ಠಾನ ಭೋಜನ ಉಂಡ ಖುಷಿಯೊಂದಿಗೆ ಕೆಸಿಎಫ್ ಕುವೈತ್ ರಾಷ್ಟ್ರೀಯ ಉಮ್ರಾ ಕನ್ವೀನರ್ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರ ನೇತ್ರತ್ವದಲ್ಲಿ ಕಾರ್ಯಕರ್ತರಲ್ಲಿ ಆಧ್ಯಾತ್ಮಿಕ ಚಿಂತನೆ ಎಂಬ ವಿಷಯ ಮಂಡಿಸಿದರು. ನಂತರ ಕೆಸಿಎಫ್ ರಾಷ್ಟ್ರೀಯ ಸಂಘಟನಾ ವಿಭಾಗದಿಂದ ಸಾರ್ವಜನಿಕ ರಸಪ್ರಶ್ನೆ ಸ್ಫರ್ದೆ ನಡೆಸಿಕೊಟ್ಟರು.

ನಂತರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಹುಮಾನ್ಯ ಫಾರೂಕ್ ಸಖಾಫಿ ವಹಿಸಿದ್ದರು. ಕೆಸಿಎಫ್ ಕುವೈತ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಮಾತನಾಡಿ ಕೆಸಿಎಫ್ ದಿನಾಚರಣೆಯನ್ನು ಕುವೈತ್ ನಲ್ಲಿ ವಿಭಿನ್ನ ರೀತಿಯಲ್ಲಿ ನಡೆಸಿದು ಸಂಘಟನೆಯನ್ನು ಬಲಪಡಿಸಲು ಆಗಿದೆ.ದೈಹಿಕವಾಗಿಯೂ, ಮಾನಸಿಕವಾಗಿ ಬಲಾಡ್ಯವಾಗಳು ಪ್ರಾವಸಿಗಳಿಗೆ ಧಾರ್ಮಿಕ ಚೌಕಟ್ಟಿನೊಳಗೆ ನಡೆಸಿದ ಧ್ವಿದಿನ ಕಾರ್ಯಕ್ರಮ ಯಶಸ್ವಿಯಾಗಲು,ಕೆಸಿಎಫ್ ರಾಷ್ಟ್ರೀಯ ನಾಯಕರುಗಳು,ಎಲ್ಲಾ ಸೆಕ್ಟರ್ ನ ಅಧ್ಯಕ್ಷರು,ಕಾರ್ಯದರ್ಶಿ ಹಾಗೂ ಎಲ್ಲಾ ಕಾರ್ಯಕಾರಿಣಿ ಸದಸ್ಯರಿಗೂ ಭಾವಪೂರ್ಣವಾಗಿ ಅಭಿನಂದನೆಗಳು ತಿಳಿಸಿದರು.ಪ್ರವಾಸಿ ಜೀವನ ಎನ್ನುವುದು ಪಯಣ.ನಾವು ಜವಾಬ್ದಾರಿಯಿಂದ ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು.ಕುಟುಂಬದವರ ಜೀವನದ ಪಯಣಕ್ಕೆ ದಾರಿ ಮಾಡಿಕೊಡುವ ಪ್ರವಾಸಿ ಕೆಸಿಎಫ್ ನೋಡಿ ಸಂತಸ ಪಡುವನು ಎಂದು ಹೇಳಿದರು.

ಆಟೋಟ ಸ್ಫರ್ದೆಯಲ್ಲಿ,ರಸಪ್ರಶ್ನೆ ಹಾಗೂ ಬರಹ ಸ್ಫರ್ದೆ ಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಸಹೋದರಿಯರಿಗೂ ಪ್ರತೇಕ ಧಾರ್ಮಿಕ ತರಗತಿ,ರಸಪ್ರಶ್ನೆ ಸ್ಫರ್ದೆ ಹಮ್ಮಿಕೊಳ್ಳಲಾಯಿತು.

ಬಹುಮಾನ್ಯ ಇಸ್ಮಾಯಿಲ್ ಸಅದಿ ಉಸ್ತಾದರ ದುವಾದೊಂದಿಗೆ ಮುಕ್ತಾಯ.

Exit mobile version