Site icon Ullalavani

22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ ಬಿಡುಗಡೆ

UN NETWORKS

ಮಂಗಳೂರು: ಮಾರ್ಚ್ 5,6,7, ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರಗಲಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ಸಮ್ಮೇಳನಾಧ್ಯಕ್ಷೆ ಎ.ಪಿ. ಮಾಲತಿಯವರಿಗೆ ನೀಡುವ ಮೂಲಕ ಅಧಿಕೃತವಾಗಿ ಸಮ್ಮೇಳನಕ್ಕೆ ಆಮಂತ್ರಿಸಲಾಯ್ತು.

ಪುತ್ತೂರಿನ ಸಾಂತ್ಯಾರಿನಲ್ಲಿರುವ ಎ.ಪಿ. ಮಾಲತಿಯವರ ಸ್ವಗೃಹ “ಚೇತನಾ” ದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಆಮಂತ್ರಣವನ್ನು ಹಸ್ತಾಂತರಿಸಿದರು.

ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ. ರಂಗಯ್ಯ ಶೆಟ್ಟಿಗಾರ್, ಪುಸ್ತಕ ಪ್ರದರ್ಶನ ವಸ್ತು ಪ್ರದರ್ಶನ ಸಮಿತಿಯ ಸಂಚಾಲಕ ಶಿವರಾಮ ರೈ, ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ. ಪುತ್ತೂರು ತಾಲೂಕು ಕ.ಸಾ.ಪ ಅಧ್ಯಕ್ಷ ಬಿ. ಐತಪ್ಪ ನಾಯ್ಕ್, ಜನಾರ್ದನ ಹಂದೆ, ಪ್ರೊ. ಎ.ವಿ.ನಾರಾಯಣ, ವತ್ಸಲಾ ರಾಜ್ಞಿ , ಪ್ರೊ. ಎ.ಪಿ. ರಾಧಾಕೃಷ್ಣ , ಲೋಕೇಶ್ ಬಲಡ್ಕ , ಬಾಲಸುಬ್ರಹ್ಮಣ್ಯ ಮಾರಾರ್, ಪ್ರಸಾದ್ ಮೊದಲಾದವರು. ಉಪಸ್ಥಿತರಿದ್ದರು.

Exit mobile version