UN NETWORKS
ಉಳ್ಳಾಲ: ಸಂಶೋಧನೆಯ ಗುಣಮಟ್ಟ ಕಾಪಾಡುವುದರ ಜತೆಗೆ ಬುದ್ಧಿವಂತಿಕೆಯ ಹಂತವನ್ನು ತಲುಪುವುದರೊಂದಿಗೆ ಶೇ.100 ರಷ್ಟು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಯಶಸ್ಸಿನ ಹಾದಿ ತಮ್ಮದಾಗಿಸಬಹುದು ಎಂದು ಪದ್ಮಭೂಷಣ ಪುರಸ್ಕೃತ , ಭಾರತೀಯ ಕೌನ್ಸಿಲ್ ವೈದ್ಯಕೀಯ ಸಂಶೋಧನೆಯ ವಿಶ್ರಾಂತ ನಿರ್ದೇಶಕ ಪ್ರೊ.ಡಾ| ನಿರ್ಮಲ್ ಕುಮಾರ್ ಗಂಗೂಲಿ ಅಭಿಪ್ರಾಯಪಟ್ಟರು.
ನಿಟ್ಟೆ ಸಂಸ್ಥೆ ಭವಿಷ್ಯದ ಚಿಂತನೆಗಳನ್ನು ಮುಂದಿಟ್ಟು ಕಾರ್ಯಾಚರಿಸುತ್ತಿರುವ ಬಗೆ ದೇಶದ ಇತರೆ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಇಲ್ಲ. ಚೀನಾ ಬೆಳವಣಿಗೆಯನ್ನು ಹೋಲಿಸುತ್ತಾ ದೇಶದ ಸಂಪನ್ಮೂಲಗಳ ಅಭಿವೃದ್ಧಿಯನ್ನು ಮರೆಯಲಾಗುತ್ತಿದೆ. ದೇಶದ ಯುವಸಮುದಾಯ ಸಂವಹನ ಕೌಶಲ್ಯವನ್ನು ವೃದ್ಧಿಸಬೇಕಿದೆ. ಅತ್ಯುತ್ತಮ ನಿಯತಕಾಲಿಕಗಳ ಅಧ್ಯಯನದೊಂದಿಗೆ ಚಿಂತನೆ ಮತ್ತು ತರಬೇತಿಯ ಗುಣಮಟ್ಟವನ್ನು ಕಾಪಾಡುವುದರ ಮೂಲಕ ಸಂಸ್ಥೆಗಳು ಮುಂದುವರಿಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ| ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಯುವ ಹಾಗೂ ಪ್ರತಿಭಾವಂತರೇ ತುಂಬಿರುವ ದೇಶ ವಿಜ್ಞಾನದಲ್ಲಿ ಮುಂದುವರಿದಿದ್ದರೂ, ಅನುದಾನ ಕೊರತೆ ಹಾಗೂ ಅನುದಾನ ಸಿಗುವ ಮೂಲ ತಿಳಿಯದಿರುವುದರಿಂದ ಸಂಶೋಧನೆಗಳಲ್ಲಿ ಹಿನ್ನೆಡೆಯಾಗುತ್ತಿವೆ. ಪ್ರಯೋಗಾಲಯವಿಲ್ಲದೆ ರಾಮನ್ ಇಫೆಕ್ಟ್ ಸಂಶೋಧನೆ ನಡೆದಿರುವುದು ವಿಜ್ಞಾನಿಗಳ ಶ್ರಮದಿಂದ ಸಾಧ್ಯವಾಗಿದೆ. ಓದುವ ಹವ್ಯಾಸವನ್ನು ಯುವಸಮುದಾಯ ಮೆರಯತ್ತಿರುವುದರಿಂದ ನಾವೀನ್ಯತೆಯ ಕೌಶಲ್ಯಗಳು ಬೆಳೆಯಲು ಅಸಾಧ್ಯವಾಗಿದೆ ಎಂದರು.
ಅಂತರಾಷ್ಟ್ರೀಯ ಸಂಬಂಧಗಳ ಹಿರಿಯ ನಿರ್ದೇಶಕ ಪ್ರೊ.ಡಾ| ಇಡ್ಯಾ ಕರುಣಾಸಾಗರ್ , ನಿಟ್ಟೆ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಡಾ| ಇಂದ್ರಾಣಿ ಕರುಣಾಸಾಗರ್ ಉಪಸ್ಥಿತರಿದ್ದರು.
ಇದೇ ಸಂದರ್ಭ ನಿಟ್ಟೆ ವಿ.ವಿ ವತಿಯಿಂದ ಪದ್ಮಭೂಷಣ ಪುರಸ್ಕøತ ಡಾ| ನಿರ್ಮಲ್ ಕುಮಾರ್ ಗಂಗೂಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.