UN NETWORKS
ಉಳ್ಳಾಲ: ಪಡಿತರ ಚೀಟಿ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ಸ್ಥಳದಲ್ಲೇ ವಿತರಿಸುವ ಯೋಜನೆ ದೇಶದಲ್ಲೇ ಪ್ರಥಮವಾಗಿ ಉಳ್ಳಾಲದಲ್ಲಿ ಜಾರಿಗೊಳಿಸಲಾಗಿದೆ, ಮುಂದೆ ಜಿಲ್ಲಾದ್ಯಂತ ನಡೆಯಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.
ಉಳ್ಳಾಲ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಸ್ಥಳದಲ್ಲೇ ಪಡಿತರ ಚೀಟಿ ವಿತರಣಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.
ಮಧ್ಯವರ್ತಿಗಳ ಹಾವಳಿ, ತಾಲೂಕು ಕಚೇರಿ ಅಲೆದಾಟ ತಡೆಯುವ ಹಾಗೂ ಪಾಸ್‍ಪೋರ್ಟ್‍ಗಿಂತಲೂ ವೇಗವಾಗಿ ಪಡಿತರ ಚೀಟಿ ತಲುಪಿಸುವ ಸಲುವಾಗಿ ಮುಖಾಂತರ ಅರ್ಜಿ ಸ್ವೀಕರಿಸಿ ಮನೆಬಾಗಿಲಿಗೇ ತಲುಪಿಸುವ ಕಾರ್ಯ ನಡೆದಿದೆ. ಇಂತಹ ಯೋಜನೆ ದೇಶದಲ್ಲೇ ಕ್ರಾಂತಿಕಾರಿಯಾಗಿದ್ದು, ಈಗಾಗಲೇ ನಾಲ್ಕು ಲಕ್ಷ ಕಾರ್ಡ್‍ಗಳನ್ನು ಅಂಚೆ ಮುಖಾಂತರ ನೀಡಲಾಗಿದೆ ಎಂದರು.
ಈ ಸಂದರ್ಭ ನಗರಸಭಾಧ್ಯಕ್ಷ ಹುಸೈನ್ ಕುಂಞಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಪೌರಾಯುಕ್ತೆ ವಾಣಿ ವಿ.ಆಳ್ವ, ಸದಸ್ಯರಾದ ಫಾರೂಕ್ ಉಳ್ಳಾಲ್, ಮುಸ್ತಫಾ ಅಬ್ದುಲ್ಲಾ, ಇಸ್ಮಾಯಿಲ್ ಪೊಡಿಮೋನು, ಮಹಮ್ಮದ್ ಮುಕಚ್ಚೇರಿ, ಬಾಝಿಲ್ ಡಿಸೋಜ, ಗ್ರಾಹಕ ಸೇವಾ ಕೇಂದ್ರದ ನಿರ್ದೇಶಕ ಅಯೂಬ್ ಉಳ್ಳಾಲ್, ಅಝೀಝ್ ಹಕ್ ಇನ್ನಿತರರು ಉಪಸ್ಥಿತರಿದ್ದರು.
`ಬಿಪಿಎಲ್‍ಗೆ ಅರ್ಜಿ ಹಾಕುವವರಲ್ಲಿ ಶೇ.90 ಮಂದಿ ಇರುತ್ತಾರೆ, ಪರಿಶೀಲನೆ ನೆಪದಲ್ಲಿ ಕಾಯಿಸುವುದು ತಪ್ಪಿಸುವ ಸಲುವಾಗಿ ಸ್ಥಳದಲ್ಲೇ ಪರಿಶೀಲನೆ ಹಮ್ಮಿಕೊಳ್ಳಲಾಗಿದ್ದು, ದೇಶದಲ್ಲೇ ಕ್ರಾಂತಿಕಾರಿ ಯೋಜನೆಯನ್ನು ಉಳ್ಳಾಲದಲ್ಲಿ ಜಾರಿಗೊಳಿಸಲಾಗಿದ್ದು, ಮೊದಲ ದಿನ 200 ಜನರಿಗೆ ಪಡಿತರ ಚೀಟಿ ನೀಡಲಾಗಿದ್ದು, ವಾರದವರೆ ಯೋಜನೆ ಮುಂದುವರಿಲಿದೆ’
ಯು.ಟಿ.ಖಾದರ್, ಆಹಾರ ಸಚಿವ