UN NETWORKS
ದೇರಳಕಟ್ಟೆ: ವಿಶ್ವದಲ್ಲಿ ಮಲೇರಿಯಾ ಪೀಡಿತ 15 ದೇಶಗಳಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದು, ಮಲೇರಿಯಾ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಲೇರಿಯಾ ಸಂಶೋಧನೆಗಳಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯ ಮಲೇರಿಯಾ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ನಿಟ್ಟೆ (ಸ್ವಾಯತ್ತ ಪರಿಗಣಿಸಲಾಗಿರುವ)ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಸತೀಶ್ ಭಂಡಾರಿ ಅಭಿಪ್ರಾಯಪಟ್ಟರು.
ಅತ್ಯಂತ ಪ್ರಾಚೀನ ರೋಗವಾಗಿರುವ ಮಲೇರಿಯಾ ಸಂಶೋಧನೆಗೆ ಅತ್ಯಂತ ಹೆಚ್ಚು ವೆಚ್ಚ ತಗಲುವುದರಿಂದ ಭಾರತದಲ್ಲಿ ಸಂಶೋಧನೆ ಹಿಂದೆ ಬಿದ್ದಿದೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತಿದ್ದು, ನಿಟ್ಟೆ ವಿಶ್ವವಿದ್ಯಾನಿಲಯವೂ ಯುಎಸ್‍ಎ ಪೆನ್‍ಸ್ಟೇಟ್ ವಿಶ್ವವಿದ್ಯಾನಿಲಯದಂತ ವಿವಿಗಳೊಂದಿಗೆ ಸಂಶೋಧನೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಸಂಶೋಧನೆಗೆ ಆದ್ಯತೆ ನೀಡಲಾಗುವುದು ಎಂದರು.
ಯುಎಸ್‍ಎ ಪೆನ್‍ಸ್ಟೇಟ್ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ಡಾ| ಚನ್ನೇ ಗೌಡ ಡಿ. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧಿಕಾರಿ ಡಾ| ಅರುಣ್ ಕುಮಾರ್, ಸಂಶೋಧನಾ ವಿಜ್ಞಾನಿಗಳಾದ ಡಾ| ಎಸ್.ಎನ್, ತಿವಾರಿ, ಡಾ| ಘೋಷ್, ಕ್ಷೇಮ ಡೀನ್ ಡಾ| ಪಿ.ಎಸ್. ಪ್ರಕಾಶ್, ಕಾರ್ಯಕ್ರಮ ಆಯೋಜನ ಸಮಿತಿ ಕಾರ್ಯದರ್ಶಿ ಡಾ| ಸುಚೇತ ಕುಮಾರಿ ಎನ್. ವೈಸ್ ಡೀನ್‍ಗಳಾದ ಡಾ| ಜಯಪ್ರಕಾಶ್ ಶೆಟ್ಟಿ, ಡಾ| ಅಮೃತ್ ಮಿರಾಜ್‍ಕರ್ ಉಪಸ್ಥಿತರಿದ್ದರು.
ವಿಚಾರ ಸಂಕಿರಣ ಆಯೋಜನ ಸಮಿತಿ ಕಾರ್ಯದರ್ಶಿ ಡಾ. ಸುಧೀಂದ್ರ ರಾವ್ ಎಂ. ಸ್ವಾಗತಿಸಿದರು.ಸಂಶೋಧನಾ ವಿದ್ಯಾರ್ಥಿ ಪ್ರಿತಿಕಾ ಎ. ಕಾರ್ಯಕ್ರಮ ನಿರ್ವಹಿಸಿದರು. ಮೆಡಿಸಿನ್ ವಿಭಾಗದ ಸಹ ಪ್ರಾದ್ಯಾಪಕ ಡಾ| ತನ್ಮಯ ಭಟ್ ವಂದಿಸಿದರು.