Site icon Ullalavani

ರಿಕ್ಷಾ-ಬೈಕ್ ಅಪಘಾತ: ಆಸ್ಪತ್ರೆಯಲ್ಲಿದ್ದ ಸ್ನೇಹಿತನಿಗೆ ಊಟ ಕೊಂಡೊಯ್ಯುತ್ತಿದ್ದ ಯುವಕ ಮೃತ್ಯು

UN NETWORKS

ಉಳ್ಳಾಲ: ರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಇದ್ದ ಸ್ನೇಹಿತನಿಗೆ ಊಟ ಕೊಂಡೊಯ್ಯುತ್ತಿದ್ದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೇರಳಕಟ್ಟೆ ಮೀಡಿಯಾ ಮಾರ್ಕ್ ಕಚೇರಿ ಎದುರುಗಡೆ ಸಂಭವಿಸಿದೆ.

ಅಂಬ್ಲಮೊಗರು ಖಂಡಿಲ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ಮಹಮ್ಮದ್ ಸಂಶೀರ್ (21) ಮೃತ ಯುವಕ. ಬೈಕಿನಲ್ಲಿ ದೇರಳಕಟ್ಟೆಯಿಂದ ನಾಟೆಕಲ್ ಕಣಚೂರು ಆಸ್ಪತ್ರೆಗೆ ಊಟ ಕೊಂಡೊಯ್ಯುವ ದಾರಿಮಧ್ಯೆ ಎದುರಿನಿಂದ ಬರುತ್ತಿದ್ದ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಸಂಶೀರ್ ತೀವ್ರ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.

ದೇರಳಕಟ್ಟೆಯ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಂಶೀರ್ ಅವಿವಾಹಿತರು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version