Site icon Ullalavani

ಅಲಂಕಾರಗುಡ್ಡೆ ದೈವಸ್ಥಾನದ ಬ್ರಹ್ಮಕಲೋಶ್ಸವದ ಪ್ರಯುಕ್ತ ಹೊರಕಾಣಿಕೆ ಮೆರವಣಿಗೆ

UN NETWORKS

ತಲಪಾಡಿ: ತಲಪಾಡಿ ಗ್ರಾಮದ ಅಲಂಕಾರಗುಡ್ಡೆ ಶ್ರೀ ಮಲರಾಯ, ಧೂಮಾವತಿ, ಬಂಟ ದೈವಸ್ಥಾನದ ಶ್ರೀ ನಾಗದೇವರು ಮತ್ತು ಶ್ರೀ ಮಲರಾಯ, ಧೂಮಾವತಿ, ಬಂಟ ದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸತ್ಕರ್ಮ ಫೆ. 21ರಿಂದ ಆರಂಭಗೊಂಡಿದ್ದು ಫೆ. 25ರ ತನಕ ನಡೆಯಲಿದ್ದು ಆ ಪ್ರಯುಕ್ತ ಶುಕ್ರವಾರ ಹೊರಟ ಹೊರೆಕಾಣಿಕೆ ಮೆರವಣಿಗೆ ಶೋಭಾಯಾತ್ರೆಗೆ ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಚಾಲನೆ ನೀಡಿದರು.

ಕೋಟೆಕಾರು ಬೀರಿ ಶ್ರೀ ಗಣೇಶ ಮಂದಿರದ ಬಳಿಯಿಂದ ಆರಂಭಗೊಂಡ ಹಸಿರುಹೊರೆ ಕಾಣಿಕೆ ಮೆರವಣಿಗೆ ಬೀರಿ-ಕೆ.ಸಿ. ರೋಡ್-ಪಿಲಿಕೂರು ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ತಲುಪಿತು.

ಬಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ತಲಪಾಡಿ ಪಂಜಾಳ ಶ್ರೀ ಬಾಲಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಜಾಹೀರಾತು

ಹೊರೆಕಾಣಿಕೆ ಮೆರವಣಿಗೆಯಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ರವೀಂದ್ರನಾಥ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಸಚ್ಚಿದಾನಂದ ಶೆಟ್ಟಿ ಹೊಸಮನೆ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುಬ್ಬಯ ಮಾರ್ಲ ಉಳಿಪಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಬಿ. ಮೋಹನ್‍ದಾಸ ಗಾಂಭೀರ, ಅಧ್ಯಕ್ಷ ಡಾ. ಜಯಪಾಲ ಶೆಟ್ಟಿ ದೊಡ್ಡಮನೆ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಕೆ.ಸಿ. ಆಳ್ವ ನೆತ್ತಿಲಬಾಳಿಕೆ, ಉಪಾಧ್ಯಕ್ಷ ರಾಮಯ್ಯ ಕಿಲ್ಲೆ ಮೇಗಿನ ಪಂಜಾಲಗುತ್ತು, ಮಲರಾಯ ದೈವಸ್ಥಾನದ ಪಾತ್ರಿ ಅಂತ ಪೂಜಾರಿ, ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಹೊರೆಕಾಣಿಕೆ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಲಂಟ ಬೊಳ್ಯಗುತ್ತು ಸೇರಿದಂತೆ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.

Exit mobile version