Site icon Ullalavani

ಇರಾ ಗ್ರಾಮದ ಹಿಂದು ರುದ್ರಭೂಮಿಗೆ ಅನುದಾನ ಮಂಜೂರು

UN NETWORKS

ಇರಾ : ಇರಾ ಗ್ರಾಮದ ಹಿಂದು ಭಾಂದವರ ಬಹುಕಾಲದ ಬೇಡಿಕೆಯಾಗಿದ್ದು ಗ್ರಾಮಕ್ಕೊಂದು ಸುಸಜ್ಜಿತ ಸ್ಮಶಾನ ನಿರ್ಮಾಣದ ಕಲ್ಪನೆಯಂತೆ ಇರಾ ಸೈಟ್ ಎಂಬಲ್ಲಿ ಈಗಾಗಲೇ 3 ತಿಂಗಳ ಹಿಂದೆ ಅಧಿಕೃತವಾಗಿ ಸರಕಾರದಿಂದ ಹಿಂದು ರುದ್ರಭೂಮಿಗಾಗಿ ಮಂಜೂರುಗೊಂಡ ಜಮೀನಿನಲ್ಲಿ ಗ್ರಾಮ ಪಂಚಾಯತ್ ಮುಖಾಂತರ ನಿರ್ಮಾಣಗೊಳ್ಳಲಿರುವ ಹಿಂದು ರುದ್ರಭೂಮಿ ಕಾಮಗಾರಿಗೆ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕ ಸಚಿವರಾದ ಯು.ಟಿ.ಖಾದರವರ ಶಿಫಾರಸ್ಸಿನ ಮೇರೆಗೆ ಮಂಜೂರುಗೊಂಡ 4ಲಕ್ಷ ರೂಪಾಯಿ ಅನುದಾನದ ಆದೇಶ ಪತ್ರವನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶಶಿಕಾಂತ್ ಸೆಂಥಿಲ್ ರವರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಯವರಿಗೆ ಹಸ್ತಾಂತರಿಸಿದರು.

ಅನುದಾನ ಬಿಡುಗಡೆಗೊಳಿಸುವಲ್ಲಿ ಸಹಕರಿಸಿದ ಬಂಟ್ವಾಳ ತಹಶಿಲ್ದಾರ್ ಪುರಂದರ ಹೆಗ್ಡೆ, ,ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ,ಧಾರ್ಮಿಕ ದತ್ತಿ ತಹಶಿಲ್ದಾರ್ ಪ್ರಭಾಕರ್, ಕಂದಾಯ ನಿರೀಕ್ಷಕರಾದ ರಾಮ, ಇರಾ ಗ್ರಾಮ ಕರಣಿಕರರಾದ ಎ.ಪಿ.ಭಟ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ, ಹಾಗೂ ಕಂದಾಯ ಇಲಾಖೆಯ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದ್ದಾರೆ.

ಗ್ರಾಮದ ಬಹುಕಾಲದ ಬೇಡಿಕೆಯನ್ನು ಈಡೇರಿಸುವಲ್ಲಿ ಅವಿರತ ಶ್ರಮ ಪಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ ಹಾಗೂ ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಅಶ್ವತ್ಥಡಿ, ರಮೇಶ್ ಪೂಜಾರಿ, ಸೀತಾ, ಹಾಗೂ ಪಂಚಾಯತ್ ಸದಸ್ಯರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

Exit mobile version