Site icon Ullalavani

ಬಗಂಬಿಲ: ಶ್ರೀ ಸತ್ಯನಾರಾಯಣ ಸಾಂಸ್ಕೃತಿಕ ಭವನಕ್ಕೆ ಶಿಲನ್ಯಾಸ

UN NETWORKS

ಕೋಟೆಕಾರ್: ಶ್ರೀ ಸತ್ಯನಾರಾಯಣ ಮಂದಿರ ಬಗಂಬಿಲ ಕೋಟೆಕಾರ್ ಇದರ ವತಿಯಿಂದ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ “ಶ್ರೀ ಸತ್ಯನಾರಾಯಣ ಸಾಂಸ್ಕೃತಿಕ ಭವನದ” ಶಿಲನ್ಯಾಸ ಸಮಾರಂಭ ಬಗಂಬಿಲದಲ್ಲಿ ನಡೆಯಿತು.
ಭವನಕ್ಕೆ ಶಂಕುಸ್ಥಾಪನೆಯನ್ನು ಮಾಡೂರು ಶಿರಡಿ ಸಾಯಿ ಮಂದಿರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಪಿ ನೆರವೇರಿಸಿದರು. ಪಿ.ಡಬ್ಲ್ಯು ಡಿ. ಗುತ್ತಿಗೆದಾರರಾದ ಮಾಧವ ರಾವ್ ಕೊಂಡಾಣ ದೀಪಬೆಳಗಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ವಹಿಸಿದ್ದು, ಚಿತ್ರದುರ್ಗದ ಉದ್ಯಮಿ ಪ್ರವೀಣ್ ಸುವರ್ಣ ಬಗಂಬಿಲ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.ಮುಖ್ಯ ಅತಿಥಿಗಳಾಗಿ ಪಿಲಿಚಾಮುಂಡಿ ದೈವಸ್ಥಾನದ ಅಧ್ಯಕ್ಷರಾದ ಮಾಧವ ಬಗಂಬಿಲ, ಲೋಕಯಪಾಲು ನಾಗಬ್ರಹ್ಮ ಮಹಾಕಾಳಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎಂ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನಾಧಿಕಾರಿ ಉಮರಬ್ಬ, ಪುರೋಹಿತರಾದ ಪಿ. ತಿರುಮಲೇಶ್ವರ ಭಟ್, ಮಂದಿರದ ಮಹಾಪೋಷಕ ದಿವಾಕರ ಬಗಂಬಿಲ, ಉದ್ಯಮಿ ಅಶೋಕ್ ರೈ ಮಡ್ಯಾರ್, ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ್, ಮಂದಿರದ ಉಪಾಧ್ಯಕ್ಷ ಗಣೇಶ್ ಪೂಜಾರಿ, ಪ್ರಧಾನ ಅರ್ಚಕ ನಾರಾಯಣ ಗಟ್ಟಿ ಉಪಸ್ಥಿತರಿದ್ದರು.

ಕೋಟೆಕಾರು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನಿಲ್ ಬಗಂಬಿಲ ಸ್ವಾಗತಿಸಿ, ಪ್ರವೀಣ್ ಐ.ಬಗಂಬಿಲ ಪ್ರಸ್ತಾವನೆಗೈದರು. ಪ್ರವೀಣ್ ಬಿ. ಎನ್. ವಂದಿಸಿ ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Exit mobile version