UN NETWORKS
ಉಳ್ಳಾಲ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಏಅಈ ಡೇ ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮವು ಸೆಕ್ಟರ್ ಸಾಂತ್ವನ ವಿಭಾಗ ಅಧ್ಯಕ್ಷರು ಮೂಸಾ ಹಾಜಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆ ಝಾಹಿರ್ ನಲ್ಲಿ ಜರುಗಿತು.
ಅತ್ಯಂತ ಕಷ್ಟ ಮತ್ತು ತ್ಯಾಗವನ್ನು ಸಹಿಸಿ ಪ್ರವಾದಿ (ಸ.ಅ) ರವರ ಅನುಚರರು (ಸ್ವಹಾಬತ್) ನಮ್ಮ ಭಾರತಕ್ಕೆ ಇಸ್ಲಾಮ್ ಧರ್ಮವನ್ನು ತಂದು ಕೊಟ್ಟಿದ್ದಾರೆ, ಅದನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಉತ್ತರ ಕರ್ನಾಟಕದಲ್ಲಿನ ಮುಸಲ್ಮಾನರ ಧಾರ್ಮಿಕ ಜ್ಞಾನ ಬಹಳ ಶೋಚನೀಯ ಅವಸ್ಥೆಯಲ್ಲಿದೆ, ಅಲ್ಲಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನ ಇಹ್ಸಾನ್ ದಾಯಿಗಳು ಬಹಳ ಕ್ರಾಂತಿಕಾರಿ ಇಸ್ಲಾಮಿಕ್ ದಅವತ್ ನಡೆಸುತ್ತಿದ್ದು, ಮುಈನುಸ್ಸುನ್ನ ಸಂಸ್ಥೆ ಕೂಡ ಅದರ ಒಂದು ಭಾಗವಾಗಿದೆ.ತಮ್ಮ ಸಹಾಯ ಸಹಕಾರ ಎಂದೆಂದೂ ಈ ಸಂಸ್ಥೆಯೊಂದಿಗೆ ಇರಬೇಕೆಂದು ಅವರು ಕರೆ ನೀಡಿದರು.
ರಾಜ್ಯ ಎಸ್ಸೆಸ್ಸೆಫ್ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮುಈನುಸ್ಸುನ್ನ ಮೊರಲ್ ಅಕಾಡೆಮಿ ಹಾವೇರಿ ಇದರ ಜನರಲ್ ಮ್ಯಾನೇಜರ್ ಕೆ.ಎಂ ಮುಸ್ತಫ ನಈಮಿ ಮೋಂಟುಗೋಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಇದೇ ವೇಳೆ ಕೆ. ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿಯವರನ್ನು ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.ಭಾರತದಿಂದ ಹಜ್ ಸಮಿತಿ ಮೂಲಕ ಆಗಮಿಸುವ ಹಜ್ಜಾಜಿಗಳಿಗೆ ಸ್ಪಷ್ಟವಾದ ಮಾಹಿತಿ ನೀಡಬಲ್ಲ ಅಮೀರ್ ಇಲ್ಲದೇ ಇರುವುದು ಖೇದಕರ, ಇದರಿಂದಾಗಿ ಹಜ್ಜಾಜ್ ಗಳು ಅನುಭವಿಸುವ ತೊಂದರೆಗಳು ಅಷ್ಟಿಷ್ಟಲ್ಲ, ಆದ್ದರಿಂದ ಮುಂದಿನ ವರ್ಷದಿಂದ ಕರ್ನಾಟಕದ ಮಟ್ಟಿಗಾದರೂ ಹಜ್ಜಾಜ್ ಗಳಿಗೆ ಮಾಹಿತಿ ನೀಡಬಲ್ಲ ಅಮೀರನ್ನು ನೇಮಕ ಮಾಡುವಂತೆ ಕರ್ನಾಟಕ ಹಜ್ಜ್ ಸಮಿತಿ ಸದಸ್ಯರಾದ ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿಯವರು ಸಂಬಂಧಪ್ಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಏಅಈ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಅಡ್ಮೀನ್ ವಿಭಾಗದ ಅಧ್ಯಕ್ಷರಾದ ಕಲಂದರ್ ಶಾಫಿ ಅಸೈಗೋಳಿಯವರು ತಮ್ಮ ಭಾಷಣದಲ್ಲಿ ಒತ್ತಾಯಿಸಿದರು.
ಉಸ್ಮಾನ್ ಸಅದಿ ನೆಲ್ಯಾಡಿ, ಝಿಯಾವುದ್ದೀನ್ ನರಿಮೊಗರು, ರಫೀಖ್ ಕೊಳಕೇರಿ, ಮುಜೀಬ್ ಹರೇಕಳ, ಪಿ.ಕೆ ಉಸ್ಮಾನ್ ಉರುವಲು ಪದವು, ಶರೀಫ್ ಕೂಳೂರು, ಹನೀಫ್ ಕೋಳಿಯೂರು, ಅಬ್ದುರ್ರಹ್ಮಾನ್ ಕರೋಪಾಡಿ, ಆಸೀಫ್ ಹೊಸ್ಮಾರ್, ಬಿಲಾಲ್ ಸಿದ್ದಕಟ್ಟೆ, ಅನ್ಸಾರ್ ಬಡಕಬೈಲ್, ಸಲಾಹುದ್ದೀನ್ ಜೋಕಟ್ಟೆ ಒಟ್ಟು 23 ಕಾರ್ಯಕರ್ತರು ಸೇರಿ ರಕ್ತದಾನ ಮಾಡಿದರು.
ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿಗಳಾದ ಡಾ.ತುರ್ಕಿ ಮುಹಮ್ಮದ್ ಮಾತಾಡಿ ರಕ್ತದಾನ ಮಾಡುವುದು ಅತೀ ಶ್ರೇಷ್ಠವಾದ ದಾನ, ನೀವು ರಕ್ತ ದಾನ ಮಾಡಿದರೆ ಒಬ್ಬರ ಜೀವ ಉಳಿಸಿದಂತೆ, ಒಬ್ಬರ ರಕ್ತದಿಂದ ಮೂರು ಜನರಿಗೆ ಲೈಫು ಕೊಡಲು ಸಾಧ್ಯ ಎಂದು ಹೇಳಿ ಕಾರ್ಯಕರ್ತರನ್ನು ಇನ್ನಷ್ಟು ಪ್ರೋತ್ಸಾಹಿಸಿ ಹುರಿದುಂಬಿಸಿದರು.
ಕಾರ್ಯಕ್ರಮವನ್ನು ಜಿದ್ದಾ ಝೋನ್ ಪ್ರ.ಕಾರ್ಯದರ್ಶಿ ಇಬ್ರಾಹೀಮ್ ಕಿನ್ಯ ಸ್ವಾಗತಿಸಿದರು, ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಜಿದ್ದಾ ಝೋನ್ ಸಾಂತ್ವನ ವಿಭಾಗ ಕಾರ್ಯದರ್ಶಿ ಹಾಗೂ ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್, ಸೆಕ್ಟರ್ ಸಾಂತ್ವನ ವಿಭಾಗ ಕಾರ್ಯದರ್ಶಿ ನವಾಝ್ ಇಮ್ದಾದಿ ಬಜಾಲ್, ಅಡ್ಮೀನ್ ವಿಭಾಗ ಕಾರ್ಯದರ್ಶಿ ಶಾಫಿ ಮಲ್ಲೂರು, ಕೆಸಿಎಫ್ ತ್ವಾಹಿಫ್ ಸೆಕ್ಟರ್ ಸಂಘಟನೆ ವಿಭಾಗ ಅಧ್ಯಕ್ಷರು ಖಾಲಿದ್ ಕಬಕ, ದಾರುಲ್ ಅಶ್ಅರಿಯ್ ಸುರಿಬೈಲ್ ಇದರ ಆರ್ಗನೈಝರ್ ಅಬ್ದುಲ್ ಅಝೀಝ್ ಹನೀಫಿ ಕಾಯಾರ್, ಕೆಸಿಎಫ್ ಝಾಹಿದಿ ಯುನಿಟ್ ಅಧ್ಯಕ್ಷರು ಬಶೀರ್ ಕೆಜೆಕಾರ್ ಮೊದಲಾದವರು ಉಪಸ್ಥಿತರಿದ್ದರು.