Site icon Ullalavani

ಶಿವ ರಾತ್ರಿಯ ಬಗ್ಗೆ ಜನರಲ್ಲಿದ್ದ ತಪ್ಪು ಕಲ್ಪನೆ ದೂರವಾಗಿ ಧಾರ್ಮಿಕ ಭಾವನೆ ಜಾಗೃತಿಯಾಗಿದೆ

UN NETWORKS

ಉಳ್ಳಾಲ: ಹಿಂದೆ ಶಿವರಾತ್ರಿಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿತ್ತು. ಆದರೆ ಇಂದು ಧಾರ್ಮಿಕ ವಿಚಾರದಲ್ಲಿ ಸಂಘ ಸಂಸ್ಥೆಗಳು ಶಿವರಾತ್ರಿಯ್ನು ಧಾರ್ಮಿಕವಾಗಿ ಆಚರಿಸುತ್ತಿರುವುದರಿಂದ ಜನರ ಮನಸ್ಥಿತಿಯೂ ಬದಲಾಗಿದ್ದು, ಎಲ್ಲರಲ್ಲಿಯೂ ಧಾರ್ಮಿಕ ಭಾವನೆ ಜಾಗೃತಿಯಾಗುತ್ತಿದೆ ಎಂದು ಬಿರುವೆರ್ ಕುಡ್ಲ ಉಳ್ಳಾಲ ಘಟಕದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.

ಅವರು ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದ ಶಿವರಾತ್ರಿ ಮಹೋತ್ಸವ ಮತ್ತು ಕುಂಪಲ ರಥೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾನಿ ವೆಂಕಟೇಶ್ ಕುಂಪಲ, ಮಂಗಳೂರು ಕ್ಷೇತ್ರ ಬಿ.ಜೆ.ಪಿ. ಉಪಾಧ್ಯಕ್ಷ ಪ್ರಕಾಶ್ ಸಿಂಪೋನಿ, ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ನಿವೃತ್ತ ಸೇನಾನಿ ಅಶೋಕ್ ಕುಂಪಲ, ಚೆಂಬುಗುಡ್ಡೆ ಕೆರೆಬೈಲ್ ಕೊರಗಜ್ಜ ಸೇವಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಬಿ, ಸೋಮೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ ಕುಂಪಲ, ಶ್ರೀ ಕ್ಷೇತ್ರದ ಅರ್ಚಕ ಭವಾನಿ ಶಂಕರ ಶಾಂತಿ, ಮಾತೃ ಮಂಡಳಿಯ ಅಧ್ಯಕ್ಷೆ ಜಯಲಕ್ಷ್ಮಿ ಉಪಸ್ಥಿತರಿದ್ದರು.

ಕೃಷ್ಣ ಶೆಟ್ಟಿ ಕುಂಪಲ ಪ್ರಾರ್ಥಿಸಿದರು, ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರ ಕುಂಪಲ ಇದರ ಮಾಧ್ಯಮ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಸುಮಾಕರ ಕುಂಪಲ ಕಾರ್ಯಕ್ರಮ ನಿರೂಪಿಸಿದರು, ಗೋಪಾಲ ಕೃಷ್ಣ ರಾವ್ ವಂದಿಸಿದರು.

Exit mobile version