Site icon Ullalavani

ಧಾರ್ಮಿಕ ಚಿಂತನೆ ನಿತ್ಯ ಜೀವನದಲ್ಲಿ ಅಳವಡಿಸಿದರೆ ಯಶಸ್ಸು ಸಾಧ್ಯ: ರವೀಶ್ ತಂತ್ರಿ

UN NETWORKS

ಉಳ್ಳಾಲ: ಜೀವನದಲ್ಲಿ ಏನೇ ಸಾಧನೆ ಮಾಡಿದರೂ ಆ ಸಾಧನೆಯ ಹಿಂದೆ ಒಂದು ದೈವಿಕವಾದ ಪ್ರೇರಣಾ ಶಕ್ತಿ ಇದೆ. ಈ ನಿಟ್ಟಿನಲ್ಲಿ ಧಾರ್ಮಿಕ ಚಿಂತನೆಗಳನ್ನು ನಾವು ನಿತ್ಯ ಜೀವನದಲ್ಲಿ ಅಳವಡಿಸಿದರೆ ಯಶಸ್ಸು ಸಾದ್ಯ ಎಂದು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ ಅಭಿಪ್ರಾಯಪಟ್ಟರು.

ಉಳ್ಳಾಲ ಉಮಾಪುರಿ, ಕಾಪಿಕಾಡಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಂಗಳೂರು ರಾಗ ತರಂಗದ ಮಾಜಿ ಪ್ರಧಾನ ಕಾರ್ಯದರ್ಶಿ ಸುಮಾ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಮಂಗಳೂರು ಎಮ್.ಸಿ.ಎಫ್ ಜನರಲ್ ಮೆನೇಜರ್ ಎಮ್.ಆರ್.ವೆಂಕಟೇಶ್ ಶರ್ಮಾ, ಮಂಗಳೂರು ಎಮ್.ಸಿ.ಎಫ್ ಇದರ ಮಾರ್ಕೆಟಿಂಗ್ ಡೆವಲಪ್ ಮೆಂಟ್-ಕೆಮಿಕಲ್ಸ್‍ನ ಉಪ ಮಹಾಪ್ರಬಂಧಕ ಕೆ.ಬಿ.ಕೀರ್ತನ್ ಕುಮಾರ್, ದುಬೈ ಉದ್ಯಮಿ ಶಶಿಧರ್ ಶೆಟ್ಟಿ ಮಜಲು ಕೈರಂಗಳ, ಮರಾಠಾಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಇದರ ಸಂಚಾಲಕ ಹರೀಶ್ ರಾವ್ ಮಡ್ಯಾರ್, ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ದೇವಸ್ಥಾನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಅತ್ತಾವರ, ಕೋಶಾಧಿಕಾರಿ ರಘುರಾಮ ಶೆಟ್ಟಿ, ಮೊಕ್ತೇಸರರಾದ ಈಶ್ವರ್ ಉಳ್ಳಾಲ್, ಮಹಾಲಿಂಗ, ನಿರ್ಮಲಾ ಕುಂಞಂಬು, ಸೇವಾ ಸಮಿತಿಯ ಗೌರವ ಅಧ್ಯಕ್ಷ ಸುರೇಂದ್ರ ನಾಯಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 2017 ನೇ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕ ಪಡೆದ 16 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡು ಸ್ವಾಗತಿಸಿದರು, ಮೊಕ್ತೇಸರ ಈಶ್ವರ್ ಉಳ್ಳಾಲ್ ಪ್ರಸ್ತಾವಿಕವಾಗಿ ಮಾತನಾಡಿದರು, ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ ವಂದಿಸಿದರು.

Exit mobile version