UN NETWORKS
ಉಳ್ಳಾಲ: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮಾರ್ಚ್ 5,6,7,ರಂದು ಜರಗಲಿರುವ 22 ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಲಾಂಛನ’ವನ್ನು ಹಿರಿಯ ಸಾಹಿತಿ ಪ್ರೊ|| ಅಮೃತ ಸೋಮೇಶ್ವರ ಅವರು ಬಿಡುಗಡೆಗೊಳಿಸಿದರು. ಕೋಟೇಕಾರ್‍ನಲ್ಲಿರುವ ಅಮೃತರ ಮನೆ “ಒಲುಮೆ”ಯಲ್ಲಿ ಸಮಾರಂಭ ಜರಗಿತು.
ಪ್ರೊ| ಡಾ.ಕೆ. ಚಿನ್ನಪ್ಪಗೌಡ ಅಮೃತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು ಅಮೃತರು ಬರೆದ ಭಾವಗಾನವೊಂದನ್ನು ರತ್ನಾವತಿ ಜೆ. ಬೈಕಾಡಿಯವರು ಹಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ| ಸುರೇಂದ್ರ ರಾವ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಬೈಕಾಡಿ ಜನಾರ್ದನ ಆಚಾರ್ ವಂದನಾರ್ಪಣೆಗೈದರು,