Site icon Ullalavani

ಬ್ರೈಟ್ ಬಾಯ್ಸ್ ಅಳೇಕಲ ದ್ವಿತೀಯ ಕ್ರಿಕೆಟ್ ಪಂದ್ಯಾವಳಿ

UN NETWORKS

ಉಳ್ಳಾಲ : ಜಾತಿ, ಮತ, ಭೇದ ಬಿಟ್ಟು ಎಲ್ಲರೂ ಸೌಹಾರ್ದತೆಯಿಂದ ಒಂದಾಗಿ ಆಡುವ ಕ್ರೀಡೆ ಕ್ರಿಕೆಟ್ ಆಗಿದೆ, ಸೌಹಾರ್ದತೆಯಿಂದ ಒಂದಾಗಿ ಬಾಳಿದರೆ ದೇಶ ಕಟ್ಟಬಹುದು ಎಂದು ವಿಧಾನ ಪರಿಷತ್‍ನ ಮುಖ್ಯ ಸಚೇತಕ ಐವನ್ ಡಿ’ಸೋಜ ಅಭಿಪ್ರಾಯಪಟ್ಟರು.

ಬ್ರೈಟ್ ಬಾಯ್ಸ್ ಅಳೇಕಲ, ಉಳ್ಳಾಲ ವತಿಯಿಂದ ಬಡ ಹಾಗೂ ನಿರ್ಗತಿಕರ ಸಹಾಯಾರ್ಥಕವಾಗಿ ಅಲೇಕಲ ಮದನಿ ಶಾಲಾ ಮೈದಾನದಲ್ಲಿ ನಡೆದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಳ್ಳಾಲ ಮದನಿ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಂ ಖಾಸಿಂ, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಮತ್ತು ಸಮಾಜ ಸೇವಕಿ ರೇಶ್ಮಾ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಉಪಾಧ್ಯಕ್ಷ ನೌಶಾದ್ ಕಿನ್ಯ ಅವರನ್ನು ಸನ್ಮಾನಿಸಲಾಯಿತು.

ಕರಾವಳಿ ವಲಯ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯು.ಬಿ. ಸಲೀಂ, ಮಂಗಳೂರು ತಾಲೂಕು ಪಂಚಾಯತ್ ಆಧ್ಯಕ್ಷ ಮೊಹಮ್ಮದ್ ಮೋನು, ಉದ್ಯಮಿ ಲಾರೆನ್ಸ್ ರೂಡಿ. ಡಿ’ಸೋಜ, ಉಳ್ಳಾಲ ನಗರ ಸಭೆ ಅಧ್ಯಕ್ಷ ಹುಸೈನ್ ಕುಂಞ ಮೋನು, ಮಂಗಳೂರು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಎ. ಎಮ್. ಖಾನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ದ.ಕ. ಜಿಲ್ಲಾ ಎಸ್.ಡಿ.ಪಿ.ಐ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಉಳ್ಳಾಲ ಯುನೈಟೆಡ್ ಸೋಶಿಯಲ್ ವೆಲ್ಪೇರ್ ಅಧ್ಯಕ್ಷ ರಹೀಂ. ಯು.ಬಿ.ಎಂ, ಉಳ್ಳಾಲ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಉದ್ಯಮಿ ಅಲ್‍ಸ್ಟೋನ್, ಉಳ್ಳಾಲ ನಗರ ಸಭೆ ಸದಸ್ಯರಾದ ಅಬ್ದುಲ್ ಫತಾಕ್, ರಝಿಯಾ ಇಬ್ರಾಹಿಂ, ಯು. ಎ.ಇಸ್ಮಾಯಿಲ್, ಉಳ್ಳಾಲ ಮದನಿ ಪಿ.ಯು. ಕಾಲೇಜಿನ ಸಂಚಾಲಕ ಯು.ಎನ್.ಇಬ್ರಾಹಿಂ, ಉದ್ಯಮಿ ಬಿ.ಎಚ್.ರಹಮತ್,ಅಳೇಕಲ ಬ್ರೈಟ್ ಬಾಯ್ಸ್ ಅಧ್ಯಕ್ಷ ಮುತ್ತಲಿಬ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಲೀಂ ಮೆಗಾ ಮತ್ತು ಇಕ್ಬಾಲ್ ಸಾಮಾನಿಗೆ, ಎ. ಎ. ಖಾದರ್ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ರಾಯಲ್ ನಾಟೆಕಲ್ ತಂಡ ಪ್ರಥಮ ಸ್ಥಾನ ಪಡೆದರು. ಸ್ಪೂರ್ತಿ ಉಳ್ಳಾಲ ಬೈಲ್ ದ್ವಿತೀಯ ಸ್ಥಾನ ಪಡೆಯಿತು. ರಿಯಾಝ್ ಚೆಂಬುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

Exit mobile version