Site icon Ullalavani

ಉಳ್ಳಾಲ: ಶಾಂತಿಗಾಗಿ ಕ್ರೀಡೆ ಎಂಬ ಘೋಷಣೆಯೊಂದಿಗೆ ಕ್ರಿಕೆಟ್ ಪಂದ್ಯಾಟ

UN NETWORKS

ಉಳ್ಳಾಲ: ಉಳ್ಳಾಲ ಕ್ರಿಕೆಟ್ ಬೋರ್ಡ್ ವತಿಯಿಂದ ಉಳ್ಳಾಲ ಪ್ರೀಮಿಯರ್ ಲೀಗ್-2018,ಸೀಸನ್ 5 ಮತ್ತು ಯು.ಟಿ.ಫರೀದ್ ಮೆಮೋರಿಯಲ್ ಟ್ರೋಫಿ2018,ಶಾಂತಿಗಾಗಿ ಕ್ರೀಡೆ ಎಂಬ ಘೋಷಣೆಯೊಂದಿಗೆ ಕ್ರಿಕೆಟ್ ಪಂದ್ಯಾಟ ಉಳ್ಳಾಲ ಸೀ ಗ್ರೌಂಡಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು,ಬಳಿಕ ಮಾತನಾಡಿದ ಅವರು ಕ್ರೀಡೆಯು ಶಾಂತಿ ಸಹೋದರತೆ ಏಕತೆಯ ಸಂಕೇತವಾಗಿದೆ,ಯುವಕರು ಕ್ರೀಡೆಯಲ್ಲಿ ಮುಂದೆ ಬಂದ ಹಾಗೆ ಉದ್ಯೋಗದಲ್ಲಿಯೂ ಮುಂದೆ ಬರಬೇಕೆಂದು ಹೇಳಿದರು.

ಉಳ್ಳಾಲ ನಗರ ಸಭೆ ಅಧ್ಯಕ್ಷ ಹುಸೈನ್ ಕುಂಞಮೋನು ಅಧ್ಯಕ್ಷತೆವಹಿಸಿದರು, ಉದ್ಯಮಿ ಎಚ್.ಕೆ.ಖಾದರ್,ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಕಲ್ಲಾಪು,ಸದಸ್ಯರಾದ ಮುಸ್ತಫ ಅಬ್ದುಲ್ಲ, ಮುಹಮ್ಮದ್ ಮುಕ್ಕಚ್ಚೇರಿ, ರಝಿಯಾ ಇಬ್ರಾಹಿಮ್, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಬಸ್ತಿಪಡ್ಪುs,ಮಾಜಿ ಮೇಯರ್ ಕೆ.ಅಶ್ರಫ್ ಮಂಗಳೂರು ಮಂಗಳಾ ಸ್ಟೇಡಿಯಂ ಅಭಿವೃದ್ಧಿಯ ನಿರ್ದೇಶಕ ಐವನ್ ಪಿಂಟೋ, ಜನತಾದಳ ವಿದ್ಯಾರ್ಥಿ ಘಟಕ ಅಧ್ಯಕ್ಷ ಸಿನಾನ್, ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್,ಉಪಾಧ್ಯಕ್ಷ ಇಕ್ಬಾಲ್ ಕೆನರಾ,ಹನೀಫ್ ಬಿ.ಎಫ್.ಸಿ, ಪ್ರಧಾನ ಕಾರ್ಯದರ್ಶಿ ಫಯಾಝ್ ಪಟ್ಲ, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಸರ್ಮದ್, ಇಂತಿಯಾಝ್ ಬಿ.ಎಫ್.ಸಿ, ಕೋಶಾಧಿಕಾರಿ ನಝೀರ್ ಅಲ್ಫಾ ಉಪಸ್ಥಿತರಿದ್ದರು.

ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಅಬ್ದುರ್ರಹಮಾನ್, ತೊಕ್ಕೊಟ್ಟು ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿಯ ಅಧ್ಯಕ್ಷ ಗೋಪಿನಾಥ್ ಕಾಪಿಕಾಡ್, ಮಂಗಳ ಸ್ಟೇಡಿಯಂ ಅಭಿವೃದ್ಧಿ ಸಮಿಯ ನಿರ್ದೇಶಕ ಸಾಜಿದ್ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು.
ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version