Site icon Ullalavani

ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ

UN NETWORKS

ಉಳ್ಳಾಲ: ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುದಾಭಿ, ಇದರ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಅಲಿ ಉಚ್ಚಿಲ್ ಅವರಿಗೆ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್‍ರವರು ಸನ್ಮಾನಿಸಿದರು.

ಇತ್ತೀಚೆಗೆ ನಡೆದ ಟ್ರಸ್ಟ್‍ನ 35ನೇ ವಾರ್ಷಿಕ ಸಮಾರಂಭಕ್ಕೆ ಕರ್ನಾಟಕ ರಾಜ್ಯಪಾಲರಾದ ವಜುಬಾಯಿ ರೂಡಬಾಲ ಅವರಿಂದ ಗೌರವಿಸುವ ಕಾರ್ಯಕ್ರಮಕ್ಕೆ ಕಾರಣಾಂತರದಿಂದ ಬರಲು ಅನಾನುಕೂಲವಾದ್ದರಿಂದ ಇಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‍ನ ಅಭಿವೃದ್ದಿ ಕುರಿತು ಚರ್ಚಿಸಿದರು, ಟ್ರಸ್ಟ್ ಕಾರ್ಯದರ್ಶಿ, ಎ.ಕೆ ಮೊಹಿಯದ್ದೀನ್ ಹಾಜಿ, ಕೋಶಾಧಿಕಾರಿ ಜೆ ಅಬ್ದುಲ್ ಹಮೀದ್, ಕಾಲೇಜು ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಹಝ್ರತ್ ಶಾಲಾ ಮುಖ್ಯೋಪಾಧ್ಯಯರುಗಳಾದ ಇಮ್ತಿಯಾಝ್, ಫಿಲೋಮಿನ, ಶಿಕ್ಷಕರಾದ ರಸೂಲ್ ಖಾನ್, ಖಾಲಿದ್, ಮತ್ತಿತ್ತರರು ಉಪಸ್ಥಿತರಿದ್ದರು.

Exit mobile version