UN NETWORKS
ಕಿನ್ಯ: ದುರ್ಗಾಪುರ, ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ 48ನೇ ವಾರ್ಷಿಕೋತ್ಸವವನ್ನು ಕೋಟೆಕಾರ್ ನೆಲ್ಲಿಸ್ಥಳ ಶ್ರೀ ಕಾಳಿಕಾಂಭ ದೇವಸ್ಥಾನದ ಅಧ್ಯಕ್ಷ ಸುಂದರ್ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ, ನಿರಂತರ ಯಕ್ಷಗಾನ ಚಟುವಟಿಕೆಯೊಂದಿಗೆ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಸಂಘ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಟಿ. ರಾಮಯ್ಯ ಕಿಲ್ಲೆ, ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಯಕ್ಷಗಾನ ಸಂಘದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯಎಂದು ವಿನಂತಿಸಿದರು.
ಸಂಘದ ಅಧ್ಯಕ್ಶರಾಗಿ ಸೇವೆ ಸಲ್ಲಿಸಿದ ಹಿರಿಯ ಸದಸ್ಯರು, ಜನಾರ್ದನ ಪಕ್ಕಳ, ದೇವಿಪುರ ತಲಪಾಡಿ ಹರಿಶ್ಚಂದ್ರ ಅಚಾರ್ಯ, ಕಿನ್ಯ ಪಾದೆ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯಕ್ಷಗಾನ ತರಭೇತಿ ನೀಡಿದ ನಾಟ್ಯಗುರು ರಕ್ಷಿತ್ ಶೆಟ್ಟಿ ಪಡ್ರೆ, ಇವರನ್ನು ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ರಾಮ ಕನಕಮುಗೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ಪ್ರಸಂಗ ಕರ್ತೃ ರಮೇಶ್ ಆಳ್ವ ದೇವಿಪುರ ಪ್ರಾರ್ಥನೆಗೈದರು. ಸಂಚಾಲಕ ಬಾಬು ಶ್ರೀ ಶಾಸ್ತಾ ಕಿನ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕಿನ್ಯ ವಾರ್ಷಿಕ ವರದಿ ಮಂಡಿಸಿದರು. ಕ್ರೀಡಾ ಕಾರ್ಯದರ್ಶಿ ಸುಕೃತ್ ಬಹುಮಾನ ವರದಿ ವಾಚಿಸಿದರು. ಮಾಜಿ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪೊಸಕುರಲ್ ನಿರ್ದೇಶಕ, ಹಿರಿಯ ಸದಸ್ಯ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.