Site icon Ullalavani

ಗುಲ್ಶನ್ ಚಿಲ್ಡ್ರನ್ ಫೆಸ್ಟ್

UN NETWORKS

ಉಳ್ಳಾಲ: ಬಬ್ಬುಕಟ್ಟೆಯ ಹಿರಾ ಕ್ಯಾಂಪಸ್‍ನಲ್ಲಿ ಇತ್ತೀಚೆಗೆ 5ರಿಂದ 12 ವರ್ಷದ ಒಳಗಿನ ಮಕ್ಕಳಿಗಾಗಿ ಏಕದಿನ ಚಿಲ್ಡ್ರನ್ ಫೆಸ್ಟನ್ನು ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕವು ಹಮ್ಮಿಕೊಂಡಿತು.

ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಕರೀಮ್ ಮತ್ತು ಮಸ್ಜಿದುಲ್ ಹುದಾ ತೊಕ್ಕೊಟ್ಟಿನ ನಿಕಟಪೂರ್ವ ಅಧ್ಯಕ್ಷರಾದ ಜನಾಬ್ ಹಸನಬ್ಬರವರು ಪಾರಿವಾಳವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.

ಬಳಿಕ ಅಬ್ದುಲ್ ಕರೀಮ್‍ರವರು ಉದ್ಘಾಟನಾ ಭಾಷಣವನ್ನು ಮಾಡುತ್ತಾ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು ಅವರ ಬಾಲ್ಯವಾಗಿದೆ. ಸನ್ನಡತೆ, ಸದಾಚಾರ, ಶಿಸ್ತು, ಪರಸ್ಪರ ಸಂಬಂಧ, ಸಹಧರ್ಮೀಯರೊಂದಿಗಿನ ಉತ್ತಮ ಬಾಂಧವ್ಯ ಮುಂತಾದ ಧಾರ್ಮಿಕ ಮೌಲ್ಯಗಳ ಬಗ್ಗೆ ಚಿಕ್ಕಂದಿನಿಂದಲೇ ಮಕ್ಕಳಿಗೆ ತರಬೇತಿಯನ್ನು ಕೊಟ್ಟು ಬೆಳೆಸಿದರೆ ಮಾತಾಪಿತರಿಗೆ, ಕುಟುಂಬಸ್ಥರಿಗೆ, ಸಮಾಜಕ್ಕೆ, ದೇಶಕ್ಕೆ ದೊಡ್ಡ ಆಸ್ಥಿಯಾಗಿ ಅವರು ಮಾರ್ಪಡುತ್ತಾರೆ.

ಈ ನಿಟ್ಟಿನಲ್ಲಿ ಗುಲ್ಶನ್ ಎಂಬ ಮಕ್ಕಳ ಸಂಘವನ್ನು ಜಮಾಅತೆ ಇಸ್ಲಾಮೀ ಹಿಂದ್ ಸ್ಥಾಪಿಸಿದೆ ಎಂದು ಹೇಳಿದರು. ಜಮಾಅತೆ ಇಸ್ಲಾಮೀ ಹಿಂದ್, ಉಳ್ಳಾಲ ಮಾಜಿ ಅಧ್ಯಕ್ಷರಾದ ಜನಾಬ್ ಪಿ. ಅಬ್ಬಾಸ್, ಎ.ಹೆಚ್. ಮಹಮೂದ್, ಜಮಾಅತೆ ಇಸ್ಲಾಮೀ ಹಿಂದ್, ಉಳ್ಳಾಲ ಮಹಿಳಾ ಸಂಚಾಲಕಿಯಾದ ಲತೀಫಾ, ಎಸ್. ಐ.ಓ. ಉಳ್ಳಾಲ ಕಾರ್ಯದರ್ಶಿಯಾದ ಸೈಯ್ಯಾಫ್, ಜಿ.ಐಓ. ಉಳ್ಳಾಲ ಸಂಚಾಲಕಿಯಾದ ತಬಸ್ಸುಮ್ ಉಪಸ್ಥಿತರಿದ್ದರು. ಗುಲ್ಶನ್ ಉಳ್ಳಾಲ ಸಂಚಾಲಕರಾದ ಮುಝಮ್ಮಿಲ್ ಅಹ್ಮದ್ ದಿಕ್ಸೂಚಿ ಭಾಷಣ ಮಾಡಿದರು. ನಂತರ ಮಕ್ಕಳಿಗೆ ಒಳಾಂಗಣ ಮತ್ತು ಹೊರಾಂಗಣ ಸ್ಫರ್ಧೆಯ ನ್ನು ಏರ್ಪಡಿಸಲಾಯಿತು.

ಸಂಜೆ 5:00 ಗಂಟೆಗೆ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಜನಾಬ್ ಇಸ್ಮಾಯಿಲ್ ಸಾಗರ್, ಜನಾಬ್ ಹಸನಬ್ಬ, ಜನಾಬ್ ಪಿ.ಅಬ್ಬಾಸ್, ಜನಾಬ್ ಎ.ಹೆಚ್. ಮಹಮೂದ್, ಜನಾಬ್ ಅಬ್ದುಲ್ ಕರೀಮ್, ಜನಾಬ್ ಅಹ್ಮದ್ ಶರೀಫ್ ಭಾಗವಹಿಸಿ ಬಹುಮಾನವನ್ನು ವಿತರಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಉಪಾಧ್ಯಕ್ಷರಾದ ಜನಾಬ್ ಅಬ್ದುರ್ರಹೀಮ್‍ರವರು ಸಮಾರೋಪ ಭಾಷಣ ಮಾಡಿದರು. 180 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Exit mobile version