Site icon Ullalavani

ಶಿವರಾತ್ರಿ ಪ್ರಯುಕ್ತ ಉಮಾಮಹೇಶ್ವರಿ ದೇವಾಲಯದಲ್ಲಿ ಅಹೋರಾತ್ರಿ ಏಕಾಹ ಭಜನಾ ಸಂಕೀರ್ತನೆ

UN NETWORKS

ಉಳ್ಳಾಲ: ಕಾಪಿಕಾಡು ಉಮಾಪುರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಆಯೋಜಿಸಲಾದ ಅಹೋರಾತ್ರಿ ಏಕಾಹ ಭಜನಾ ಸಂಕೀರ್ತನೆಯನ್ನು ಛಾಯಾಗ್ರಾಹಕ, ಉದ್ಯಮಿ, ಗೋಪಿನಾಥ್ ಬಗಂಬಿಲ ಮತ್ತು ಬಿಂದ್ಯಾ ಗೋಪಿನಾಥ್ ದಂಪತಿ ಉದ್ಘಾಟಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರು ರಾಮಚಂದ್ರ ಭಟ್, ಮೊಕ್ತೇಸರರಾದ ಈಶ್ವರ್ ಉಳ್ಳಾಲ್, ದಿನೇಶ್ ಅತ್ತಾವರ, ರಘುರಾಮ್ ಶೆಟ್ಟಿ ಕಾಪಿಕಾಡ್, ಮಹಾಲಿಂಗ, ನಿರ್ಮಲ ಕುಂಞಂಬು, ಸೇವಾ ಸಮಿತಿ ಗೌರವಾಧ್ಯಕ್ಷ ಸುರೇಂದ್ರ ನಾಯಕ್, ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ವೇಣುಗೋಪಾಲ್, ಪ್ರಮುಖರಾದ ಡಾ. ಆರ್.ಕೆ.ಶೆಟ್ಟಿ, ಕೂಸಪ್ಪ ಗಟ್ಟಿ, ಸಂಜೀವ ಶೆಟ್ಟಿ, ನಾರಾಯಣ ರಾವ್, ಆನಂದ ಶೆಟ್ಟಿ, ಪ್ರವೀಣ್ ಉಳ್ಳಾಲಬೈಲ್, ಶಿವರಾಮ್ ಕಾಪಿಕಾಡ್ ಭಜನಾ ಸಂಚಾಲಕರಾದ ವಸಂತ್ ಅಂಬಿಕಾರೋಡ್ ಮುಂತಾದವರು ಉಪಸ್ಥಿತರಿದ್ದರು.

Exit mobile version