Site icon Ullalavani

ಮಹಿಳೆ ಮೋಹಕ್ಕೆ ಬಿದ್ದು ದೇಶ ಮಾರಲು ಹೋಗಿದ್ದ ವಾಯುಸೇನೆ ಅಧಿಕಾರಿ!

UN NETWORKS

ನವದೆಹಲಿ: ಹನಿ ಟ್ರ್ಯಾಪ್ ಮೂಲಕ ಭಾರತೀಯ ಸೇನೆಯ ಅಧಿಕಾರಿಗಳನ್ನು ಸೆಳೆಯುವ ಪ್ರಯತ್ನ ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ(ಐಎಸ್ ಐ) ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ವಾಯು ಸೇನೆಯ ಅಧಿಕಾರಿಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.

ರಾಜಧಾನಿ ದೆಹಲಿಯಲ್ಲಿ ವಾಯುಸೇನೆಯ 51 ವರ್ಷದ ಗ್ರೂಪ್ ಕ್ಯಾಪ್ಟನ್ ಅರುಣ್ ಮರ್ವಾಹ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇವರು ಅಪರಿಚಿತ ಮಹಿಳೆಯ ಜತೆ ವಾಟ್ಸಪ್ ಸಂದೇಶ ಕಳುಹಿಸುತ್ತಿದ್ದರು.ಈ ಅಪರಿಚಿತ ಮಹಿಳೆ ಐಎಸ್ ಐ ಏಜೆಂಟ್ ಎಂದು ಹೇಳಲಾಗುತ್ತಿದೆ. ಹನಿ ಟ್ರ್ಯಾಪ್ ಮೂಲಕ ಅರುಣ್ ಮರ್ವಾಹ್ ಅವರನ್ನು ಬಲೆಗೆ ಬೀಳಿಸಲು ಐಎಸ್ ಐ ಪ್ರಯತ್ನಿಸಿತ್ತು ಎಂದು ವರದಿಗಳು ಮಾಹಿತಿ ಹೊರ ಹಾಕಿವೆ.

ಇವರಿಬ್ಬರ ಮಧ್ಯೆ ಕೆಲವೊಂದು ಗುಪ್ತ ಮಾಹಿತಿಗಳ ಸಹಿತ ಕೆಲವು ವೈಯಕ್ತಿಕ ಲೈಂಗಿಕ ಸಂದೇಶಗಳು ರವಾನೆಯಾಗಿವೆ ಎಂದು ಹೇಳಲಾಗುತ್ತಿದೆ.

Exit mobile version