ಕೋಟೆಕಾರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಳವಿಗೆ ವಿಫಲಯತ್ನ ನಡೆಸಿರುವ ಘಟನೆ ಕೋಟೆಕಾರು ಸಮೀಪ ನಡೆದಿದೆ.
ಕೋಟೆಕಾರು ಅಜ್ಜಿನಡ್ಕ ಸಲಫಿ ನಗರದ ಕೆ.ಎಚ್. ಮೊಯ್ದಿನ್ ಅವರ ಮನೆಯಲ್ಲಿ ಮಂಗಳವಾರ ಕಳ್ಳತನ ನಡೆದಿದ್ದು ಐದು ಪಾಸ್‍ಪೋರ್ಟ್, ಎರಡು ಎಟಿಎಂ ಕಾರ್ಡ್ ಹಾಗೂ 2500ರೂ. ಕಳ್ಳತನಗೈದಿದ್ದಾರೆ. ಅಲ್ಲಿಂದ ಪಕ್ಕದ ಸಿ.ಎಂ. ಅಹ್ಮದ್ ಹಾಗೂ ಮೊಹಮ್ಮದ್ ಸಿರಾಜ್ ಅವರ ಮನೆಗಳಲ್ಲೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.