UN NETWORKS
ಕೊಣಾಜೆ: ಆರ್ಥಿಕವಾಗಿ ಹಿಂದುಳಿದ ಕುಟುಂಬದ ನೆರವಿಗೆ ನಿಂತ ಟ್ರಸ್ಟ್‍ನ ಕಾರ್ಯ ಜನಮೆಚ್ಚುವ ಕಾರ್ಯಕ್ರವಾಗಿದೆ, ಎಲ್ಲರ ಸಹಕಾರದಿಂದ ಸುಸಜ್ಜಿತ ಮನೆ ನಿರ್ಮಿಸಲಾಗಿದೆ ಎಂದು ಇಂಟರನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ.
ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾದ ನಳಿನಿ ಶೆಟ್ಟಿ ಹತ್ತು ವರ್ಷಗಳ ಹಿಂದೆ ಸಾಲ ಮಾಡಿ ಕೊಣಾಜೆ ಸಮೀಪ ಜಾಗವನ್ನು ಖರೀದಿಸಿದ್ದರು. ನಾಲ್ಕು ವರ್ಷಗಳಿಂದ ಹಾಕಿರುವ ಫೌಂಡೇಷನ್ನಿನಲ್ಲಿ ಸಣ್ಣ ಮನೆ ನಿರ್ಮಿಸಿದ್ದರು. ಆದರೆ ಅದರಲ್ಲಿ ಅವರು ಪಡುತ್ತಿದ್ದ ಸಂಕಷ್ಟವನ್ನು ಗಮನಿಸಿ ಊರಿನ ಮಂದಿ ಸಂಘಸಂಸ್ಥೆಗಳಿಂದ ಆರ್ಥಿಕ ಸಹಾಯ ಒದಗಿಸಿ ಮನೆ ನಿರ್ಮಿಸಿಕೊಡುವಂತೆ ತನ್ನ ಬಳಿ ಬಂದಿದ್ದರು. ಅದರಂತೆ ಇಂಟರನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಗಮನ ಹರಿಸಿದ ಪರಿಣಾಮ ಅಧ್ಯಕ್ಷರ ಸ್ಪಂಧನೆಯಂತೆ ಸದಸ್ಯರು ಕೈಜೋಡಿಸಿದರು. ಮನೆ ಕೊಟ್ಟರೆ ಸಾಕು ಅನ್ನುವುದು ಎಲ್ಲರ ಮನದಲ್ಲಿರುತ್ತದೆ. ಆದರೆ ಟ್ರಸ್ಟ್ ಅಧ್ಯಕ್ಷರ ಹಾಗೂ ಸದಸ್ಯರ ಸಾಮಾಜಿಕ ಕಳಕಳಿ ಹಾಗೂ ಹೃದಯವಂತಿಕೆಯಿಂದ ವಾಸಕ್ಕೆ ಯೋಗ್ಯ ರೀತಿಯ ಸಂತೋಷದಿಂದ ಬಾಳಿ ಬದುಕುವ ಮನೆ ನಿರ್ಮಿಸಲಾಗಿದೆ ಎಂದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ವಸತಿ ಊಟ ಕೊಡುವುದು ಸರಕಾರದ ಕೆಲಸ. ಆದರೆ ಜನಸಂಖ್ಯೆ ಜಾಸ್ತಿಯಾಗಿರುವುದರಿಂದ ಸರಕಾರದಿಂದ ಅಸಾಧ್ಯವಾಗಿದೆ. ಮನೆ ಉತ್ತಮವಾಗಿದ್ದರೆ ಮನೆಯವರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ನಾಯಕರ ಹೃದಯ ಶ್ರೀಮಂತಿಕೆಯನ್ನು ಇಲ್ಲಿ ಸ್ಮರಿಸಬೇಕಿದೆ ಎಂದರು.
ಸದಾನಂದ ಶೆಟ್ಟಿ ಟ್ರಸ್ಟ್ ಅಧ್ಯಕ್ಷ, ವನ್ಯ ಜೀವಿ ಸಂರಕ್ಷಣಾ ಮಂಡಳಿ ಅಧ್ಯಕ್ಷ ಕೊಡ್ಮಾಣ್ ರಾಮಚಂದ್ರ ಶೆಟ್ಟಿ, ಮಾಜಿ ಶಾಸಕ ಕೆ,ಜಯರಾಮ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ , ವಿಜಯಲಕ್ಷ್ಮಿಬಿ. ಶೆಟ್ಟಿ, ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ರಾಜ್‍ಗೋಪಾಲ್ ರೈ, ಸಂಚಾಲಕ ಪ್ರಸಾದ್ ರೈ ಕಲ್ಲಿಮಾರ್. ಹಿರಿಯರಾದ ರಘುರಾಮ ಕಾಜವ, ರಘುರಾಮ್ ಶೆಟ್ಟಿ ಅತ್ತಾವರ, ಮಾದವ ನಾಯಕ್ ಅಡ್ಯಾರ್, ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು , ರವೀಂದ್ರ ರೈ ಹರೇಕಳ, ಶೌಕತ್ ಆಲಿ, ಸುರೇಶ್ ಚೌಟ, ಪಿ.ಎಸ್. ಭಂಡಾರಿ, ಗಣೇಶ್ ಮಲ್ಲಿ ಪುಷ್ಪಾಕರ್, ಜಿತೇಂದರ ಶೆಟ್ಟಿ, ಶ್ರೀನಾಥ್ ರೈ, ರಾಮಚಂದ್ರ ಆಳ್ವ, ಅಡ್ಯಾರ್ ಮಾಧವ ನಾಯ್ಕ್, ರಾಜೇಶ್ ಶೆಟ್ಟಿ ಪಜೀರು ಗುತ್ತು, ರಮಾನಾಥ ಶೆಟ್ಟಿ ಕ್ಕೆಮಜಲು, ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.