Site icon Ullalavani

ಬಿಜೆಪಿಗರು ಶಿಲಾನ್ಯಾಸಗೈದ ರಸ್ತೆಗಳೆಲ್ಲ ಕಾಮಗಾರಿ ನಡೆದಿವೆ:ಸಂತೋಷ್ ರೈ

UN NETWORKS

ಕುರ್ನಾಡು: ಒಂದು ಕಾಲದಲ್ಲಿ ರಿಕ್ಷಾದವರು ಬರಲು ಒಲ್ಲದ ಪ್ರದೇಶದ ಕಾಂಕ್ರೀಟಿಕರಣ ಯುವಜನರ ಹಾಗೂ ಪಂಚಾಯಿತಿ ಸದಸ್ಯರ ಸಹಕಾರದಿಂದ ನೆರವೇರುವ ಮೂಲಕ ದಶಕಗಳ ಜನರ ಬೇಡಿಕೆ ಈಡೇರಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ.

ಅವರು ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಣೆಮಾರ್ ಪಿದಮಲೆ ಕೂಡುರಸ್ತೆಗೆ ಕಾಶಿಹಿತ್ಲು ಎಂಬಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯವರು ಶಿಲಾನ್ಯಾಸ ನೆರವೇರಿಸಿದ ಎಲ್ಲಾ ಕಾಮಗಾರಿಗಳು ಮುಗಿದಿವೆ. ಪಕ್ಷದ ಮುಖಂಡರು ಮಾತ್ರವಲ್ಲ ಪಂಚಾಯಿತಿ ಸದಸ್ಯರು ಚಾಲನೆ ನೀಡಿರುವ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣವಾಗಿವೆ. ಹಿಂದೆ ಪಕ್ಷದ ಮುಖಂಡರು ತಮ್ಮ ಭೂಮಿಯನ್ನು ಮಾರಿ ರಸ್ತೆ ನಿರ್ಮಿಸಿದ ಇತಿಹಾಸವಿದೆ. 13,14 ನೇ ಹಣಕಾಸು ಮತ್ತು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ರೂ. 3 ಲಕ್ಷ ಅನುದಾನದಲ್ಲಿ 69 ಮೀ ಕಾಂಕ್ರೀಟಿಕರಣ ಕಾಮಗಾರಿಯನ್ನು ಪೂರೈಸುವ ಮೂಲಕ ಊರಿಗೆ ಕಿರೀಟ ಇಟ್ಟಂತಾಗಿದೆ. ದಶಕಗಳಿಂದ ಸೇತುವೆಯಿಲ್ಲದೆ ಪ್ರದೇಶ ಕುಗ್ರಾಮದಂತಿತ್ತು. ರಿಕ್ಷಾದವರು ಬರಲು ಒಪ್ಪದೇ ಹೆರಿಗೆಗೆ ಬರುವವರು, ವೃದ್ಧರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ತಂದ ಉದಾಹರಣೆಗಳಿತ್ತು. ಮದುಮಗಳು ಕಷ್ಟಪಟ್ಟು ನಡೆದುಕೊಂಡು ಬರಬೇಕಾದ ಸ್ಥಿತಿಯಿತ್ತು. ಆದರೆ ಪ್ರದೇಶದ ಯುವಜನರ ಹೋರಾಟದ ಫಲವಾಗಿ ಹಾಗೂ ಪಂಚಾಯಿತಿ ಸದಸ್ಯರ ಒತ್ತಾಸೆಯಿಂದ ರಸ್ತೆ ಕಾಂಕ್ರೀಟಿಕರಣ ನಡೆದಿದೆ ಎಂದರು.

ಪಂಚಾಯಿತಿ ಸದಸ್ಯ ಶಿವಶಂಕರ್ ಭಟ್ ಮಾತನಾಡಿ ರಸ್ತೆ ನಿರ್ಮಿಸದೇ ಇದ್ದಲ್ಲಿ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಇಂಜಿನಿಯರ್ ಬಳಿ ತಿಳಿಸಿದ್ದೆ. ಅದರಂತೆ ಸರಿಯಾದ ಸಮಯದಲ್ಲಿ ಪಂಚಾಯಿತಿ ಸಹಕಾರದ ಜತೆಗೆ ಕಾಂಕ್ರೀಟಿಕರಣ ಕಾಮಗಾರಿ ನೆರವೇರಿದೆ ಎಂದರು.

ಜಾಹೀರಾತು

ಮುಡಿಪು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಟಿ.ಜಿರಾಜಾರಾಂ ಭಟ್, ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷ ಶೈಲಜಾ ಮಿತ್ತಕೋಡಿ, ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ, ಪಂಚಾಯಿತಿ ಸದಸ್ಯರುಗಳಾದ ಶಿವಶಂಕರ್ ಭಟ್, ಬಿ.ಕೆ.ಪುಷ್ಪ, ಗೋಪಾಲ ಬಂಗೇರ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ಕ್ಷೇತ್ರ ಮಹಿಳಾ ಕಾರ್ಯದರ್ಶಿ ಶಕೀಲಾ ಜನಾರ್ದನ್, ನವೀನ್ ಗಟ್ಟಿ, ಮಂಜುನಾಥ ಮೂಲ್ಯ, ನವೀನ್ ಕುಮಾರ್ ಶೆಟ್ಟಿ ಕೊಡಕ್ಕಲ್, ರಾಧಾಕೃಷ್ಣ ಭಟ್, ಈಶ್ವರ್ ಭಟ್, ರಘು ಭಟ್, ರಮೇಶ್ ಪೂಜಾರಿ ಬೆಲ್ಜೆಮಾರ್, ರಾಜಾರಾಂ ಭಟ್, ತುಳಸಿ ನಿತಿನ್ ಗಟ್ಟಿ, ಕಿರಣ್ ಗಟ್ಟಿ, ಯಶೋದಾ, ಸುನೀತಾ, ಸುಂದರ್ ಪೂಜಾರಿ, ಮನೋಜ್ ಗುಳಿಗದ್ದೆ, ಮೋಹನ್ ಮಜಲ್, ವರದರಾಜ್ ಪೈ, ಗಂಗಾಧರ ಗಟ್ಟಿ, ನಾಗೇಶ್ ಕುಲಾಲ್, ಸುರೇಶ್ ಗಟ್ಟಿ, ಹರೀಶ್ ತುಂಬೆಕೋಡಿ, ಹರಿಪ್ರಸಾದ್ ಶೆಟ್ಟಿ, ಜಗನ್ನಾಥ್ ಕುಲಾಲ್ ಕುರ್ನಾಡು, ಗಣರಾಜ್ ಕಿನ್ನಾಜೆ, ಉದಯ ಸಪಲ್ಯ ಕುರ್ನಾಡು, ಆಶೀಶ್ ಆಳ್ವ ಗುಳಿಗದ್ದೆ, ಹರಿಶ್ಚಂದ್ರ ತುಂಬೆಕೋಡಿ ಉಪಸ್ಥಿತರಿದ್ದರು.

Exit mobile version