Site icon Ullalavani

ಕುಂಡೂರು: ಅಹ್ಲ್‍ಬೈತ್ ಸಂಗಮ ಮತ್ತು ಮಜ್ಲಿಸ್‍ನ್ನೂರ್ ಕಾರ್ಯಕ್ರಮ

UN NETWORKS

ಮಂಗಳೂರು: ಮಜ್ಲಿಸುನ್ನೂರು ಕಾರ್ಯಕ್ರಮದಲ್ಲಿ ಕರೆಯಲ್ಪಡುವ ಪ್ರತಿಯೊಂದು ಪ್ರವಾದಿ ವರ್ಯರ ಹೆಸರುಗಳಲ್ಲಿ ವಿಶೇಷವಾದ ಅರ್ಥವಿದೆ. ಧಾರ್ಮಿಕ ಚೌಕಟ್ಟಿನೊಳಗೆ ಇರುವ ಹಿಂದಿನಿಂದಲೇ ಆಚರಣೆಯಲ್ಲಿ ಬಂದ ಮಾಲೆ, ಮೌಲೂದು ಮುಂತಾದ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.

ಅವರು ಕುಂಡೂರು ಕೇಂದ್ರ ಜುಮ್ಮಾ ಮಸೀದಿ ಮತ್ತು ನುಸ್ರತುಲ್ ಇಸ್ಲಾಂ ಸಮಿತಿ ಇದರ ಆಶ್ರಯದಲ್ಲಿ ಮಂಗಳವಾರ ನಡೆದ ಬೃಹತ್ ಅಹ್ಲ್‍ಬೈತ್ ಸಂಗಮ ಮತ್ತು ಮಜ್ಲಿಸುನ್ನೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚೌಕಟ್ಟು ಮೀರಿದ ಕಾರ್ಯಕ್ರಮಗಳು ಬೇಡ. ಪ್ರವಾದಿಯವರು ಏನನ್ನು ಕಲಿಸಿದ್ದಾರೆಯೋ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಬರಬೇಕಾದ ಕೆಲಸ ನಮ್ಮದು ಎಂದರು.

ಸಚಿವ ಖಾದರ್ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳುವ ಇಂತಹ ಉತ್ತಮ ಕಾರ್ಯಕ್ರಮಗಳಿಂದ ಸೌಹಾರ್ದತೆ ಬೆಳೆಯಲು ಸಾಧ್ಯವಾಗುತ್ತದೆ. ಜನರಿಗೆ ಸಮಾಜದ ಬಗ್ಗೆ ಅರ್ಥಮಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ವಕ್ಪ್ ಬೋರ್ಡ್ ಜಿಲ್ಲಾಧ್ಯಕ್ಷ ಕಣಚೂರು ಮೋನು, ಉಪಾಧ್ಯಕ್ಷರಾದ ಶಾಹುಲ್ ಹಮೀದ್ ಮೆಟ್ರೋ, ನೆಕ್ಕರೆ ಬಾವು, ಸದಸ್ಯ ಅಬೂಸ್ವಾಲೀಹ್ ಸಚಿವ ಯು.ಟಿ. ಖಾದರ್‍ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಯ್ಯದ್ ಜಿಫ್ರಿ ತಂಙಳ್, ಪಾಣಕ್ಕಾಡ್ ಶಫೀಕ್ ಅಲಿ ಶಿಹಾಬ್ ತಂಙಳ್, ಸಯ್ಯದ್ ರಯೀಸ್ ತಂಙಳ್, ಸಯ್ಯದ್ ಶಮೀಮ್ ತಂಙಳ್, ಸಯ್ಯದ್ ತ್ವಾಹಾ ತಂಙಳ್, ಸಯ್ಯದ್ ಹುಸೈನ್ ಬಾಅಲವಿ ತಂಙಳ್, ಜುನೈದ್ ಜಿಫ್ರಿ ತಂಙಳ್ ಆತೂರು, ಅಮೀರ್ ತಂಙಳ್, ಶರಪುದ್ದೀನ್ ತಂಙಳ್ ಪುತ್ತೂರು, ಭಾಷಾ ತಂಙಳ್, ಅಲಿ ತಂಙಳ್ ಕರಾವಳಿ, ಮುಹಮ್ಮದ್ ಅಕ್ರಮ್ ಅಲಿ ತಂಙಳ್, ಅನಸ್ ತಂಙಳ್ ಗಂಡಿಬಾಗಿಲು, ಯಹ್ಯಾ ತಂಙಳ್, ಮುಹಮ್ಮದ್ ಅಫ್‍ವಾಮ್ ಅಲಿ ತಂಙಳ್, ಪೂಕುಂಞ ತಂಙಳ್, ಬದ್ರುದ್ದೀನ್ ತಂಙಳ್, ಅಬ್ದುಲ್ ರಹ್‍ಮಾನ್ ತಂಙಳ್ ಸೂರಿಂಜೆ, ಶಾಹುಲ್ ಹಮೀದ್ ಅಲ್ ಹಾದಿ ತಂಙಳ್, ಸ್ವಬಾಹ್ ತಂಙಳ್ ಉದ್ಯಾವರ, ಸಿಬ್‍ಗತ್ತುಲ್ಲಾಹ್ ತಂಙಳ್ ಕರೋಡ, ಇಹ್ಸಾನ್ ತಂಙಳ್ ಕಾಸರಗೋಡ್, ಮಖ್‍ದೂಮ್ ತಂಙಳ್ ಪಾವೂರು, ಇಬ್ನ್ ಶಂಶುದ್ದೀನ್ ತಂಙಳ್ ಮಂಜೇಶ್ವರ, ಅಬೂಬಕರ್ ತಂಙಳ್ ತಲಚ್ಚೇರಿ, ಪಾತೂರು ಉಸ್ತಾದ್, ಕೆ.ಎಂ. ಖಾಸಿಂ ದಾರಿಮಿ ಕಿನ್ಯ ಇಬ್ರಾಹಿಂ ಬಾಖವಿ ಕೆಸಿರೋಡ್, ಸ್ವದಕತ್ತುಲ್ಲಾಹ್ ಫೈಝಿ, ಹಾರೂನ್ ಅಹ್ಸನಿ, ಝೈನ್ ಸಖಾಫಿ, ಶಮೀಂ ಸಖಾಪಿ, ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮೊದಲಾದವರುಉಪಸ್ಥಿತರಿದ್ದರು. ಅಬ್ದುಲ್ ಲತೀಫ್ ದಾರಿಮಿ ಸ್ವಾಗತಿಸಿದರು.

Exit mobile version