Site icon Ullalavani

ವಿದ್ಯಾರ್ಥಿಗಳೇ ಟ್ರಾಫಿಕ್ ಪೊಲೀಸರು !

UN NETWORKS

ಮಂಗಳೂರು: ಡಿಗ್ರೀ ಕಾಲೇಜು ವಿದ್ಯಾರ್ಥಿಗಳೆಂದರೆ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುವವರೇ ಜಾಸ್ತಿ. ಅದರ ನಡುವೆಯೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಅನ್ನುವ ಕಾಲೇಜಿನ ಆಜ್ಞೆಯಂತೆ ಸೋಮವಾರ ಸಂಜೆ ಅಲೋಷಿಯಸ್ ಕಾಲೇಜಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳು ಪಿವಿಎಸ್, ಜ್ಯೋತಿ ವೃತ್ತಗಳಲ್ಲಿ ಟ್ರಾಫಿಕ್ ಪೊಲೀಸರ ಜತೆಗೂಡಿ ವಾಹನಗಳನ್ನು ನಿಯಂತ್ರಿಸಿದರು.

ಪಿವಿಎಸ್ ವೃತ್ತದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಟ್ರಾಫಿಕ್ ಪೊಲೀಸರಾದ ಸಂಪತ್ ಅವರ ನಿರ್ದೇಶನದಂತೆ ವಾಹನಗಳನ್ನು ನಿಯಂತ್ರಿಸಿದರು. ಸಂಜೆ ಹೊತ್ತಿನಲ್ಲಿ ವಾಹನಗಳ ಸಾಲು ಅತಿಯಾಗಿರುವ ಸಮಯದಲ್ಲೇ ವಿದ್ಯಾರ್ಥಿಗಳು ಮೂರು ಭಾಗಗಳಲ್ಲಿ ನಿಂತು , ವಾಹನ ಸವಾರರಿಗೆ ಸೂಚನೆ ನೀಡುವುದರ ಜತೆಗೆ ಹೆಲ್ಮೆಟ್ ಧರಿಸದ ಮಂದಿಗೆ ಬುದ್ಧಿಮಾತನ್ನು ಹೇಳಿದರು. ಹೆಚ್ಚಾಗಿ ದ್ವಿಚಕ್ರ ವಾಹನ ಚಲಾಯಿಸುವ ವಿದ್ಯಾರ್ಥಿಗಳು ಟ್ರಾಫಿಕ್ ನಿಯಮಗಳನ್ನೇ ಪಾಲಿಸದೆ, ನಗರವ್ಯಾಪ್ತಿಯಲ್ಲಿ ಎರ್ರಾಬಿರ್ರಿಯಾಗಿ ಸುತ್ತಾಡುತ್ತಿರುತ್ತಾರೆ.

ಅಲ್ಲದೆ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡವರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಆದರೆ ಕಾಲೇಜಿನ ಇಂತಹ ಶಿಕ್ಷಣ ವಿದ್ಯಾರ್ಥಿಗಳನ್ನು ತಮ್ಮನ್ನು ತಾವೇ ತಿದ್ದುವಂತೆ ಮಾಡುತ್ತದೆ. ಇದರ ಜತೆಗೆ ಸಾಮಾಜಿಕ ಜಾಗೃತಿಯೂ ಮೂಡುತ್ತದೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Exit mobile version