Site icon Ullalavani

ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಅದ್ಧೂರಿ ಚಾಲನೆ

UN NETWORKS

ಮಂಗಳೂರು : ನೆಹರುಮೈದಾನದಲ್ಲಿ ನಡೆದ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ (ಸಿಪಿಎಲ್ -2018 ಕ್ಕೆ ಕರಾವಳಿ ಸಮೂಹ ಕಾಲೇಜುಗಳ ಅಧ್ಯಕ್ಷ ಗಣೇಶ್ ರಾವ್ ಚಾಲನೆ ನೀಡಿದರು.

ಕೋಸ್ಟಲ್ವುಡ್ ಕಲಾವಿದರು ಮತ್ತು ತಂತ್ರಜ್ಞರ ಅಸೋಸಿಯೇಷನ್ ( ಸಿಎಟಿಸಿಎ) ನೇತೃತ್ವದಲ್ಲಿ ಪಂದ್ಯಾಟ ಆಯೋಜಿಸಲಾಗಿತ್ತು.
ಮೂರು ದಿನಗಳ ಟೂರ್ನಮೆಂಟಿನಲ್ಲಿ ಕಲಾವಿದರು, ತಂತ್ರಜ್ಞರು ಹಾಗೂ ಮಾಧ್ಯಮದವರು ಪಾಲ್ಗೊಳ್ಳುತ್ತಿರುವುದು ಬಲು ಅಪರೂಪದ ಸನ್ನಿವೇಶ. ಕೋಸ್ಟಲ್ ವುಡ್ ಯುವಕಲಾವಿದರು ಇನ್ನಷ್ಟು ಬೆಳೆದು ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಹೆಸರು ಪಡೆಯುವಂತಾಗಬೇಕು ಎಂದು ಹಾರೈಸಿದರು.

ಈ ಸಂದರ್ಭ ನಮ್ಮ ಟಿವಿ ಮುಖ್ಯಸ್ಥ ಶಿವಶರಣ್ ಶೆಟ್ಟಿ, ಮಿಸಸ್ ಇಂಡಿಯಾ -2017 ತೃಪ್ತಿ ರಾವ್, ರಾಜ್ಯಪ್ರಶಸ್ತಿ ಪುರಸ್ಕೃತ ನಟ ನವೀನ್ ಡಿ ಪಡೀಲ್ ಹಾಗೂ ಜಯಕಿರಣ ಪತ್ರಿಕೆ ಮಾಲೀಕರು ಹಾಗೂ ತುಳು ಚಿತ್ರ ನಿರ್ಮಾಪಕ, ನಿರ್ದೇಶಕರಾಗಿರುವ ಪ್ರಕಾಶ್ ಪಾಂಡೇಶ್ವರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೋಸ್ಟಲ್ ವುಡ್ ನ ತುಳುವೆರೆ ಸ್ಟಾರ್ಸ್, ಕುಡ್ಲ ರಾಕ್ ಸ್ಟಾರ್ಸ್, ಕರಾವಳಿ ಕಿಂಗ್ಸ್, ಕುಡ್ಲ ಲಿಜೆಂಡ್ಸ್, ಕೋಸ್ಟಲ್ ವಾರಿಯರ್ಸ್, ಕೋಸ್ಟಲ್ ವುಡ್ ತುಳುವಾಸ್, ತುಳುನಾಡು ಲಯನ್ಸ್ ಮತ್ತು ಮಂಗಳೂರು ಟೈಗರ್ಸ್ ತಂಡಗಳು ಭಾಗವಹಿಸಿದ್ದವು. ತುಳು ಕಾಮಿಡಿ ಸ್ಟಾರ್ಸ್ ಮತ್ತು ಮೀಡಿಯಾ ಸೂಪರ್ ಸ್ಟಾರ್ಸ್ ಪ್ರಾಯೋಗಿಕ ಪಂದ್ಯಾಟದಲ್ಲಿ ಪಾಲ್ಗೊಂಡಿತ್ತು.

ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ರಾಜ್ಯ ಸರಕಾರದ ಮುಖ್ಯಸಚೇತಕ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಕಾರ್ಪೊರೇಟರ್ ಮಹಾಬಲ ಮಾರ್ಲ ಮುಂತಾದವರು ಉಪಸ್ಥಿತರಿದ್ದರು.

Exit mobile version