Site icon Ullalavani

ರಕ್ತದಾನ ಶಿಬಿರದಿಂದ ಮನಷ್ಯತ್ವದ ಬಿತ್ತರ: ಉಮರಬ್ಬ ಮಾಸ್ಟರ್

UN NETWORKS

ಕೆ.ಸಿ.ರೋಡು: ಮಾನವೀಯ ಮೌಲ್ಯಗಳು, ಮನುಷ್ಯತ್ವ ಮಾಯವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ರಕ್ತದಾನಗಳಂತಹ ಶಿಬಿರಗಳು ನಿರಂತರ ನಡೆಸುವ ಮುಖಾಂತರ ಮುಂದಿನ ಪೀಳಿಗೆಗೆ ಮಾನವೀಯ ಮೌಲ್ಯಗಳನ್ನು ಸಾರಬಹುದು ಎಂದು ಕೆ.ಸಿ.ರೋಡು ಎಸ್‍ವೈಎಸ್ ಅಧ್ಯಕ್ಷ ಎನ್.ಎಸ್.ಉಮರಬ್ಬ ಮಾಸ್ಟರ್ ಅಭಿಪ್ರಾಯಪಟ್ಟರು.

ಕೆ.ಸಿ.ರೋಡು ಕಾಟುಂಗೆರೆಗುಡ್ಡೆ ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಇದರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಕಾರದಲ್ಲಿ ಭಾನುವಾರ ಕೆ.ಸಿ.ರೋಡು ಜಂಕ್ಷನ್‍ನಲ್ಲಿ ನಡೆದ ಮೂರನೇ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಕೈಕಾಲು ಗಟ್ಟಿ ಇರುವ ಸಂದರ್ಭ ನೆರೆಯವರು, ಪರಿಸರದವರ ಕಷ್ಟದಲ್ಲೂ ಭಾಗಿಯಾದಾಗ ಮುಂದಿನ ದಿನಗಳಲ್ಲಿ ನಮ್ಮ ಕಷ್ಟದಲ್ಲಿ ಇತರರು ಭಾಗಿಯಾಗುತ್ತಾರೆ. ಇಂದು ಪಾಶ್ಚಿಮಾತ್ಯ ಸಂಸ್ಕøತಿಯ ಅನುಕರಣೆಯಲ್ಲಿ ನಾವಿದ್ದು, ಅಪಘಾತ ನಡೆದಾಗ ಗಾಯಾಳುಗಳನ್ನು ರಕ್ಷಿಸುವ ಬದಲು ಫೊಟೋ ತೆಗೆದು ವಾಟ್ಸಾಪ್‍ನಲ್ಲಿ ಹಾಕುವಲ್ಲಿ ತಲ್ಲೀನರಾಗುತ್ತಿರುವುದು ದುರಂತ ಎಂದರು.

ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಮೊಯಿದ್ದೀನ್ ಬಾವ ಶಿಬಿರ ಉದ್ಘಾಟಿಸಿದರು. ಸಾಮಾಜಿಕ ಹೋರಾಟಗಾರ ಅಬ್ಬಾಸ್ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಸಂಶುದ್ದೀನ್ ಉಚ್ಚಿಲ್, ಗಲ್ಫ್ ಸಮಿತಿ ಸದಸ್ಯ ಝಕರಿಯ್ಯಾ ಕೆ.ಬಿ, ಉಪಾಧ್ಯಕ್ಷ ರಫೀಕ್ ಕಾಟುಂಗರೆ, ಯುನೈಟೆಡ್ ಸೋಶಿಯಲ್ ವೆಲ್ಫೇರ್ ಆರ್ಗನೈಝೇಶನ್ ಅಧ್ಯಕ್ಷ ರಹೀಂ ಯು.ಬಿ.ಎಂ, ಡೈಮಂಡ್ ವೆಲ್ಫೇರ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ರಶೀದ್ ಇಂಜಿನಿಯರ್, ಬ್ಲಡ್ ಡೋನರ್ಸ್ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಜತೆ ಕಾರ್ಯದರ್ಶಿ ಮುಸ್ತಫಾ ಕೆ.ಸಿ.ರೋಡು, ಉದ್ಯಮಿ ಇಬ್ರಾಹಿಂ ಉಚ್ಚಿಲ್, ಲತೀಫ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಸಲಾಂ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version