Site icon Ullalavani

ಕೊಣಾಜೆ: ರಸ್ತೆ ಕಾಂಕ್ರೀಟಿಕರಣಕ್ಕೆ ಚಾಲನೆ

UN NETWORKS

ಕೊಣಾಜೆ: ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಟ್ಟಿಂಜ ಅಡ್ಕರೆ ಪಡ್ಪು ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಸಚಿವ ಯು.ಟಿ.ಖಾದರ್ ಅವರ ಅನುದಾನ ಬಿಡುಗಡೆಯಾಗಿದ್ದು ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಕೊಣಾಜೆ ಗ್ರಾಮಕ್ಕೆ 4 ವರ್ಷದಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗೆ 20ಕೋಟಿಗಿಂತಲೂ ಅಧಿಕ ಅನುದಾನವನ್ನು ಸಚಿವ ಯು.ಟಿ.ಖಾದರ್ ಒದಗಿಸಿ ಕೊಟ್ಟಿರುತ್ತಾರೆ,ಅವರನ್ನು ಈ ಕ್ಷೇತ್ರದಲ್ಲಿ ಪಡೆದದ್ದು ನಾವು ಭಾಗ್ಯವಂತರು ಎಂದು ಹೇಳಿದರು.

ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ,ಪಂಚಾಯತ್ ಸದಸ್ಯ ಇಕ್ಬಾಲ್ ಬರುವ,ಕ್ಯಾಥಲಿನ್ ಡಿಸೋಜ,ಅಚ್ಚುತ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಬಂಗೇರ ಮುಟ್ಟಿಂಜ, ಮಜ್ಲಿಸ್ ಸಖಾಪತ್ ಸುನ್ನಿಯಾ ಪ್ರಾಂಶುಪಾಲ ಇಬ್ರಾಹಿಂ ಶೌಕತ್ ಕೊಪ್ಪ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಬೆನೆಟ್,ಕೊಣಾಜೆ ಗ್ರಾಮ ಸಮಿತಿಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಲೀಮ್ ಮೆಗಾ,ಇಕ್ಬಾಲ್ ಸಾಮಾನಿಗೆ,ಗುತ್ತಿಗೆದಾರ ಅಬ್ದುಲ್ ಖಾದರ್,ಇಬ್ರಾಹಿಂ ಕೊಪ್ಪ ,ಪಳ್ಳಿ ಬ್ಯಾರಿ, ಶರೀಫ್ ಬರುವ, ಮೆಸ್ಕಾಮ್ ಸಲಹಾ ಸಮಿತಿ ಸದಸ್ಯ ಮೊಹಮ್ಮದ್ ಅಡ್ಕರೆ, ನಾರಾಯಣ ಪೂಜಾರಿ, ಕೊರಗಪ್ಪ ಪೂಜಾರಿ,ಮಿಥುನ್, ಜಯಾನಂದ ಬಂಗೇರ, ಐವನ್ ಡಿಸೋಜ,ಇಕ್ಬಾಲ್,ಹಸೈನಾರ್,ಆಸೀಪ್, ಕರೀಂ, ಝುಬೈರ್,ನೌಶಾದ್ ಉಪಸ್ಥಿತರಿದ್ದರು.

Exit mobile version