Site icon Ullalavani

ಸರ ಕಳವುಗೈದ ಆರೋಪಿ ಬಂಧನ

UN NETWORKS

ಉಳ್ಳಾಲ: ಸರಕಳವು ನಡೆಸುತ್ತಿದ್ದ ಅಂತರಾಜ್ಯ ಕುಖ್ಯಾತಿ ಕಳ್ಳ ಕಾಸರಗೋಡಿನ ನಾಯಮ್ಮಾರಮೂಲೆಯ ಅಬ್ದುಲ್ ಹ್ಯಾರೀಸ್ (29) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ದೇರಳಕಟ್ಟೆ ಸಮೀಪ ಈತನನ್ನು ಬಂಧಿಸಲಾಗಿದೆ. ಆರೋಪಿ ಜ.12 ರಂದು ಪಾಣೆಮಂಗಳೂರಿನ ಡೋನಿ ನಾಬರ್ಟ್  ಫೆರ್ನಾಂಡಿಸ್ ಎಂಬವರು ಸೋಮೇಶ್ವರ ಬೀಚ್ ಗೆ ಸ್ನೇಹಿತೆ ಜತೆಗೆ ಬಂದಿದ್ದಾಗ , ಹ್ಯಾರೀಸ್ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಸಿದು ಪರಾರಿಯಾಗಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಕೈಯಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಸರದ ಅಂದಾಜು ಮೌಲ್ಯ ರೂ. 60,000 ಆಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Exit mobile version