UN NETWORKS
ಮುನ್ನೂರು:ಮುನ್ನೂರು ಗ್ರಾ.ಪಂ ವ್ಯಾಪ್ತಿಯ ಸಂತೋಷ್ ನಗರದ 6ನೇ ಮತ್ತು 7ನೇ ವಾರ್ಡಿನ ಅಡ್ಡ ರಸ್ತೆಗೆ 25ಲಕ್ಷ ವೆಚ್ಚದಲ್ಲಿ ನಿಮಾರ್ಣವಾಗುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಚಾಲನೆ ನೀಡಿದರು.
ತಾ.ಪಂ ಸದಸ್ಯೆ ವಿಲ್ಮ ಡಿ’ಸೋಜಾ, ಕಾಂಗ್ರೆಸ್ ಸಲೀಂ ಮೇಗಾ ಮುನ್ನೂರು ಗ್ರಾ.ಪಂ ಸದಸ್ಯರಾದ ಹಸೈನಾರ್, ಬಾಸ್ಕರ್ ಕುತ್ತಾರ್, ಪುಸ್ಬ, ವಿಲೀಂ ಡಿ’ಸೋಜಾ, ಸಂತೋಷ್ ನಗರ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್, ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಎನ್, ಮೂನ್ನೂರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪೋಲ್ ಲೋಬೋ, ಸ್ಥಳಿಯರಾದ ಶುಕೂರು, ಮಜೀದ್, ರಹ್ಮಾನ್, ಮಹೇಶ್, ಮುಹಮ್ಮದ್, ಜನಪ್ಪನ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.