UN NETWORKS
ಉಳ್ಳಾಲ: ಮಹಿಳೆಯೊಬ್ಬರಿಗೆ ಜೀವಬೆದರಿಕೆಯೊಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದಳದ ಪೊಲೀಸರು ಕುಖ್ಯಾತ ಮೂರು ಕೊಲೆ ಪ್ರಕರಣಗಳ ಆರೋಪಿ ಉಪ್ಪಳ ನಿವಾಸಿ ಮಹಮ್ಮದ್ ರಫೀಕ್ ಯಾನೆ ನಪ್ಪಾಟೆ ರಫೀಕ್ (29)ಎಂಬಾತನನ್ನು ಬಂಧಿಸಿದ್ದಾರೆ.
ನಪ್ಪಾಟೆ ರಫೀಕ್ ಕುಖ್ಯಾತ ರೌಡಿಯಾಗಿದ್ದು , ಈತನ ವಿರುದ್ಧ ಮೂರು ಕೊಲೆ ಮತ್ತು ಕೊಲೆಯತ್ನ, ಕಿಡ್ನಾಪ್ ಸೇರಿದಂತೆ 13 ಪ್ರಕರಣಗಳಿವೆ. ಈತನ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದನು.