Site icon Ullalavani

ಎಸ್ .ಎಸ್.ಎಲ್.ಸಿ ಎಂಬುದು ವಿದ್ಯಾರ್ಥಿ ಜೀವನದ ಅತೀ ಪ್ರಮುಖ್ಯ ಘಟ್ಟ – ಶಾಹುಲ್ ಹಮೀದ್

UN NETWORKS

ದೇರಳಕಟ್ಟೆ : ಎಸ್.ಎಸ್.ಎಲ್.ಸಿ ಶಿಕ್ಷಣ ಎಂಬುದು ಮಾನವನ ಜೀವನದ ಯಶ್ವಸಿನ ಅತೀ ಪ್ರಾಮುಖ್ಯ ಹಂತ ಶಿಕ್ಷಣವು ಮನುಷ್ಯನನ್ನು ಉತ್ತಮ ಮನುಷ್ಯನನ್ನಾಗಿ ನಿರೂಪಿಸುತ್ತದೆ. ಇಂದಿನ ಔಪಚಾರಿಕ ಶಿಕ್ಷಣದಲ್ಲಿ ,ಪ್ರತಿ ಮನುಷ್ಯನು ಕನಿಷ್ಠ ಪ್ರೌಢ ಶಿಕ್ಷಣವನ್ನದಾರು ಪಡೆಯಲೇಬೇಕು ಪ್ರೌಢ ಶಿಕ್ಷಣದ ಹಂತ ಎಸ್.ಎಸ್.ಎಲ್.ಸಿ ಆಗಿರುತ್ತದೆ .

ಎಸ್.ಎಸ್.ಎಲ್.ಸಿ ವರೇಗಿನ ಶಿಕ್ಷಣ ಮತ್ತು ಎಸ್.ಎಸ್.ಎಲ್.ಸಿ ತೇರ್ಗಡೆ ಮನುಷ್ಯ ಜೀವನದ ಅತೀ ಪ್ರಮುಖ್ಯವಾದ ಹಂತ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾಬ್ ಶಾಹುಲ್ ಹಮೀದ್ ಹೇಳಿದರು .ಅವರು ಇತ್ತೀಚೆಗೆ ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯವು ದೇರಳಕಟ್ಟೆಯ ಕಣಚೂರು ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಗೆಲುವಿಗೊಂದು ಸುಗಮ ದಾರಿ ಎಂಬ ಕಾರ್ಯಕ್ರಮದ ಉಧ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತ ಶಿಕ್ಷಣವು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಮತ್ತು ಸಮಾಜದಲ್ಲಿ ನಮಗೆ ಗೌರವ ಘನತೆಯನ್ನು ತಂದು ಕೊಡುವ ಏಕೈಕ ಸಾಧನ ಎಂದರು.

ಕಾರ್ಯಗಾರವನ್ನು ಉಧ್ಘಾಟಿಸಿದ ಕರ್ನಾಟಕ ಪ್ರೌಢ ಶಿಕ್ಷಣ ನಿರ್ದೇಶಕಾರದ ಫಿಲೋಮಿನ ಲೋಬೋರವರು ಶಿಕ್ಷಣಕ್ಕೆ ತಾರತಮ್ಯವಿಲ್ಲ ಹೆಣ್ಣು ,ಗಂಡು ಎಂಬ ಬೇದಬಾವ ಮಾಡದೆ ಪ್ರೌಢ ಶಿಕ್ಷಣದವರೆಗೆ ಎಲ್ಲರು ಖಡ್ಡಾಯವಾಗಿ ಶಿಕ್ಷಣವನ್ನು ಪಡೆಯಲೇಬೇಕು ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಗಂಡುಮಕ್ಕಳು ಬಹಳ ಹಿಂದುಳಿದಿದ್ದಾರೆ .ಅವರು ಶೈಕ್ಷಣಿಕ ಮುಖ್ಯವಾಹಿನಿಗೆ ಬರಬೇಕು ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನಿರ್ಣಯಕರಾಗಬೇಕೆಂದು ಹೇಳಿದರು .

ಕಾರ್ಯಕ್ರಮದಲ್ಲಿ ಕಣಚೂರು ಅಕಡೆಮಿಕ್ ಆಫ್ ಜನರಲ್ ಎಜ್ಯುಕೇಶನ್‍ನ ಅಧ್ಯಕ್ಷರಾದ ಹಾಜಿ. ಯು.ಕೆ ಮೋನು ಕಣಚೂರು , ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ , ಕನ್ನೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೋಪೆಸರ್ ಅಬ್ದುಲ್ ರಹ್‍ಮಾನ್ ,ಡಯೆಟ್‍ನ ಹಿರಿಯ ಉಪನ್ಯಾಸಕಿ ಸುಮಂಗಳ ಕಣಚೂರ್ ಕಾಲೇಜ್‍ನ ಪ್ರಾಂಶುಪಾಲರು ಆದ ಹಾಜಿ ಇಕ್ಬಾಲ್ ಅಹಮ್ಮದ್ ಯು.ಟಿ ಉಪಸ್ಥಿತರಿದ್ದರು .

ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕ ಕೋಶಾಧಿಕಾರಿ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು . ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕದ ಕಾರ್ಯದರ್ಶಿ ಎಂ.ಹೆಚ್.ಮಲಾರ್ ವಂದಿಸಿದರು .ಶಿಕ್ಷಣ ಸಂಯೋಜಕಿ ಹಿಲ್ಡಾ ಕ್ಲಮೇನ್ಸಿಯಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಕಣಚೂರು ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿದರು .

Exit mobile version