UN NETWORKS
ಉಳ್ಳಾಲ:`ಕಳೆದ ಚುನಾವಣೆ ಸಂದರ್ಭ ವಿರೋಧಿಗಳು ಸಾಕಷ್ಟು ಅಪಪ್ರಚಾರ ಮಾಡಿದ್ದರೂ ಮತದಾರರು ಸಚಿವ ಸ್ಥಾನದಲ್ಲಿ ಕೂರುವಂತೆ ಮಾಡಿದರು, ಈ ಬಾರಿಯೂ ವಾಟ್ಸಾಪ್‍ನಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ, ಅಂತಹವರು ಧೈರ್ಯವಿದ್ದರೆ ಮುಂದೆ ಬಂದು ಮಾತನಾಡಲಿ’ ಇದು ಆಹಾರ ಸಚಿವ ಯು.ಟಿ.ಖಾದರ್ ಅವರ ಸವಾಲು.
ದಸರಾ ಬಂತೆಂದರೆ ವಿವಿಧ ವೇಷಧಾರಿಗಳನ್ನು ಕಾಣಲು ಸಾಧ್ಯವಾಗುತ್ತದೆ. ಅದೇ ರೀತಿ ಚುನಾವಣೆ ಎಂದರೆ ದಸರಾ ಇದ್ದಂತೆ, ಚುನಾವಣೆ ಸಮೀಪಿಸುತ್ತಲೇ ವಿರೋಧ ಪಕ್ಷದವರು ಮತದಾರರ ಬಳಿ ಬಂದು ಹಸಿ ಸುಳ್ಳುಗಳನ್ನು ಹೇಳಿ ನಂತರ ಐದು ವರ್ಷ ಪತ್ತೆಯಿರುವುದಿಲ್ಲ. ಯಾವುದೇ ಭಾಗದ ಮತದಾರರನ್ನು ಮೂರ್ಖರನ್ನಾಗಿಸಿದರೂ ಉಳ್ಳಾಲದ ಮತದಾರರನ್ನು ಈ ವಿಷಯದಲ್ಲಿ ಏಮಾರಿಸಲು ಆಗದು ಎಂದು ಹೇಳಿದರು.
ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಉಪಾಧ್ಯಕ್ಷರಾದ ಸುರೇಶ್ ಭಟ್ನಗರ, ಫೈರೋಝ್ ಉಳ್ಳಾಲ್, ಸಂಘಟನಾ ಕಾರ್ಯದರ್ಶಿ ಸಲೀಂ ಮೇಘಾ ಅಸೈಗೋಳಿ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಎನ್.ಎಸ್.ಕರೀಂ, ಕ್ಷೇತ್ರಾಧ್ಯಕ್ಷ ಆಲ್ವಿನ್ ಡಿಸೋಜ, ಯುವಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ರವೂಫ್, ಸಂಘಟನಾ ಕಾರ್ಯದರ್ಶಿ ಅನ್ಸಾಫ್ ಕುತ್ತಾರ್ ಇನ್ನಿತರರು ಉಪಸ್ಥಿತರಿದ್ದರು.
ಮುಖಂಡ ಅಯೂಬ್ ಮಂಚಿಲ ಕಾರ್ಯಕ್ರಮ ನಿರೂಪಿಸಿದರು.
`ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಮಾತ್ರವೇ ಇರಬೇಕಾಗಿದ್ದ ಇಂದಿರಾ ಕ್ಯಾಂಟೀನ್ ಉಳ್ಳಾಲದಲ್ಲಿ ಮಾತ್ರವೇ ಹೋಬಳಿ ಮಟ್ಟಕ್ಕೆ ಬಂದಿದೆ, ಉಳ್ಳಾಲ ಕ್ಷೇತ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಲಾಗಿದ್ದು, ನಗರಸಭೆ ಒಂದನೇ ಸ್ಥಾನದಲ್ಲಿದೆ’
ಯು.ಟಿ.ಖಾದರ್, ಆಹಾರ ಸಚಿವ