Site icon Ullalavani

ಅಲೈಕುಂ ಬಿಲ್ ಜಮಾಅ,ಅಹ್ಲುಸುನ್ನ ಸತ್ಯ ಪಥವಾಗಿದೆ :ಖಾಝಿ ಬೇಕಲ್ ಉಸ್ತಾದ್

UN NETWORKS

ಕೈರಂಗಳ: ಇಲ್ಲಿನ ಎಸ್.ವೈ.ಎಸ್ ತೋಟಾಲ್ ವಿದ್ಯಾನಗರ ಹಾಗೂ ಎಸ್.ಎಸ್.ಎಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆ ಜಂಟಿ ಆಶ್ರಯದಲ್ಲಿ ಜನವರಿ 28 ರಂದು ತಾಜುಲ್ ಉಲಮಾ ನಗರ ಗುಂಡುಕಟ್ಟೆ ರಿಫಾಯಿ ಮಸ್ಜಿದ್ ವಠಾರ ದಲ್ಲಿನ ನೂರುಲ್ ಉಲಮಾ ವೇದಿಕೆಯಲ್ಲಿ ಬ್ರಹತ್ ಸುನ್ನೀ ಸಮ್ಮೇಳನ ಜರುಗಿತು.

ಸ್ವಾಗತ ಸಮಿತಿ ಚೆಯರ್ಮ್ಯಾನ್ ಅಬ್ಬಾಸ್ ಹಾಜಿ ತೋಟಾಲ್ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.ಉಡುಪಿ ಚಿಕ್ಕಮಗಳೂರು,ಹಾಸನ ಜಿಲ್ಲಾ ಸಂಯುಕ್ತ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ,ಮಾತನಾಡುತ್ತಾ ಅಹ್ಲುಸುನ್ನ ಎಂಬುದು ಸತ್ಯಪಥವಾಗಿದೆ,ಸಂಘಟಿತವಾಗಿ ಸುನ್ನತ್ ಜಮಾಅತ್ ನಲ್ಲಿ ಪ್ರವರ್ತಿಸಿ ಸುನ್ನೀ ಆದರ್ಶವನ್ನು ಜೀವನದಲ್ಲಿ ಅಳವಡಿಸುವುದು ಯುವ ಸಮೂಹದ ಗುರಿಯಾಗಬೇಕಾಗಿದೆ ಎಂದರು.

ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅಧ್ಯಕ್ಷತೆ ವಹಿಸಿ ,ಮಾತನಾಡಿ ಎಸ್.ಎಸ್.ಎಫ್ ನಂತ ಸಂಘಟನೆಗಳಿಂದ ಸಮಾಜದಲ್ಲಿ ದೀನೀ ಪ್ರಬೋದನೆ ನಡೆಯುತ್ತಿರುವುದು ಶ್ಲಾಘನೀಯ.ಸುನ್ನತ್ ಜಮಾಅತ್ ನ ಪಸರಿಸುವಲ್ಲಿ ಸಂಘಟನೆಗಳ ಪಾತ್ರ ಮಹತ್ತರವಾಗಬೇಕೆಂದರು.ಮೌಲಾನಾ ಪೆರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣ ಗೈದರು.ಸೈಯದ್ ಯಾಸೀನ್ ಅಸ್ಸಖಾಫ್ ತಂಙಳ್ ಕೆದುಂಬಾಡಿ ಸಮಾರೋಪ ದುವಾಗೈದರು.

ಕಾರ್ಯಕ್ರಮದಲ್ಲಿ ಎಸ್.ಜೆ.ಎಂ ಜಿಲ್ಲಾಧ್ಯಕ್ಷ ಮುಹಿಯ್ಯದ್ದೀನ್ ಸಹದಿ ತೋಟಾಲ್,ಮಾಜಿ ಖತೀಬ್ ಅಬ್ದುಲ್ ಖಾದರ್ ಮುಸ್ಲಿಯಾರ್ ನಂದಾರ್,ಉರುಮಣೆ ಜುಮಾ ಮಸ್ಜಿದ್ ಖತೀಬ್ ನಾಸೀರ್ ಸಹದಿ ಕಲ್ಲಾಪು,ಎಚ್.ಕಲ್ಲು ಜಮಾ ಮಸೀದಿ ಖತೀಬ್ ರಫೀಕ್ ಅಹ್ಸನಿ.ಉಳ್ಳಾಲ ಡಿವಿಶನ್ ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ಸಖಾಫಿ,ಉಳ್ಳಾಲ ಸೆಕ್ಟರ್ ನ ಖುಬೈಬ್ ತಂಙಳ್,ಭಾರತೀಯ ಕ್ರಷಿಕ ಸಮಾಜದ ಅಧ್ಯಕ್ಷ ಎ.ಎ ಹೈದರ್ ಪರ್ತಿಪ್ಪಾಡಿ,ರಾಜ್ಯ ಎಸ್.ಎಸ್.ಎಫ್ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ಎಸ್.ವೈ.ಎಸ್ ಪಡಿಕ್ಕಲ್ ಅಧ್ಯಕ್ಷರಾದ ಟಿ.ಕೆ. ಇಸ್ಮಾಯಿಲ್,ಎಂ.ಜೆ.ಎಂ ತೋಟಾಲ್ ಅಧ್ಯಕ್ಷ ಟಿ.ಕೆ ಇಸ್ಮಾಯಿಲ್,ಉದ್ಯಮಿ ಮಜೀದ್ ಹಾಜಿ ರಾಜ್ ಕಮಾಲ್,ಬಾವ ಹಾಜಿ ನಡುಪದವು,ಪುತ್ತು ಬಾವ ಹಾಜಿ, ಅಲ್-ಅಮೀನ್ ಫ್ರೆಂಡ್ಸ್ ಗೌರವಾಧ್ಯಕ್ಷ ಅಹ್ಮದ್ ಕಂಙಿ,ರಿಫಾಯಿ ಮಸ್ಜಿದ್ ಅಧ್ಯಕ್ಷ ಹೈದರ್,ಜಿಲ್ಲಾ ಎಸ್.ವೈ.ಎಸ್ ಉಪಾಧ್ಯಕ್ಷ ಸಿದ್ದೀಕ್ ಸಖಾಫಿ ಮೂಳೂರು,ತಾ.ಪಂ ಸದಸ್ಯ ಹೈದರ್ ಕೈರಂಗಳ,ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ,ಎಸ್.ಎಸ್‌ಎಫ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ,ಶರೀಫ್ ಮುಡಿಪು,ಅಬ್ದುಲ್ಲಾ ಕುಚ್ಚಿಗುಡ್ಡೆ,ಮಹಮ್ಮದ್ ಲೆಕ್ಕಸಿರಿ,ಎಸ್.ಎಸ್. ಎಸ್. ಫ್ ಡಿ.ಜಿ ಕಟ್ಟೆ ಯುನಿಟ್ ಅಧ್ಯಕ್ಷ ಶಿನಾನ್ ಸುಟ್ಟ, ಮತ್ತಿತರು ಉಪಸ್ಥಿತರಿದ್ದರು.

ಎಸ್.ವೈ‌.ಎಸ್ ಅಧ್ಯಕ್ಷ ಅಬೂಬಕರ್ ಮದನಿ ತೋಟಾಲ್ ಸ್ವಾಗತಿಸಿ,ಸ್ವಾಗತ ಸಮಿತಿ ಕನ್ವೀನರ್ ಇಕ್ಬಾಲ್ ಕೈರಂಗಳ ವಂದಿಸಿದರು..
ಶಂಸುದ್ದೀನ್ ಮೊಂಟೆಪದವು ನಿರೂಪಣೆಗೈದರು.

Exit mobile version