Site icon Ullalavani

ಉಳ್ಳಾಲದಲ್ಲಿ ನಿವೃತ ಶಿಕ್ಷಕರಿಗೆ ಸನ್ಮಾನ

UN NETWORKS

ಮಂಗಳೂರು : ಶಿಕ್ಷಣ ಕ್ಷೇತ್ರವು ಸಾರ್ವಕಾಲಿಕ ಪವಿತ್ರವಾದುದು .ಶಿಕ್ಷಣ ರಂಗದಲ್ಲಿ ಅರ್ಪಣಾಭಾವನೆಯಿಂದ ಕಾರ್ಯ ನಿರ್ವಹಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಅಭಿನಂದನಾರ್ಹರು ಎಂದು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷರಾದ ಜನಾಬ್ ಹಾಜಿ ಅಬ್ದುಲ್ ರಶೀದ್ ರವರು ಹೇಳಿದರು .

ಅವರು ಇತ್ತೀಚೆಗೆ ಉಳ್ಳಾಲ ಕ್ಲಸ್ಟರ್‍ನಲ್ಲಿ ನಿವೃತ್ತರಾದ ಶಿಕ್ಷಕರನ್ನು ಹಾಗೂ ಜಿಲ್ಲಾ ಪ್ರಶಸ್ತಿ ವೀಜೇತ ಶಿಕ್ಷಕಿಯನ್ನು ಸನ್ಮಾನಿಸಿ ಮಾತಾಡುತ್ತಾ ತಂದೆ ,ತಾಯಿಗಳನ್ನು ತೊರೆದು ಎಳೆಯ ಮಕ್ಕಳು ಶಿಕ್ಷಕರನ್ನೇ ಸರ್ವಸ್ವ ಎಂದು ಭಾವಿಸಿ ಅವರ ಬಳಿಗೆ ಬಂದಾಗ ಗುಣಾತ್ಮಕವಾದ ಶಿಕ್ಷಣ ನೀಡಬೇಕು ಎಂದರು .

ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ಉರ್ದು ಹಿ.ಪ್ರಾ.ಶಾಲೆ ಹಳೆಕೋಟೆ ಇಲ್ಲಿನ ನಿವೃತ್ತರಾದ ಶಿಕ್ಷಕಿ ಶಶಿಕಲಾ ಶೆಟ್ಟಿ , ಬಿ.ಎಂ.ಶಾಲೆಯ ಶಿಕ್ಷಕಿಯರಾದ ಪ್ರಫುಲ್ಲ ಮತ್ತು ಎಸ್ತಾರ್ ದೇವದತ್ತ್ , ಒಂಭತ್ತು ಕೆರೆಯ ಶಾಲೆಯ ಶಿಕ್ಷಕಿ ಶೋಭನ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಾದ ಭಾರತ್ ಪ್ರೌಢ ಶಾಲೆಯ ಶಿಕ್ಷಕಿ ವಿನಯರವರನ್ನು ಸನ್ಮಾನಿಸಲಾಯಿತು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ .ಕೆ ಮಂಜನಾಡಿ ಸನ್ಮಾನಿತರಿಗೆ ಶುಭಹಾರೈಸಿದರು .

ಈ ಸಂದರ್ಭದಲ್ಲಿ ಒಂಭತ್ತು ಕೆರೆಯ ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ,ಮೇಲಂಗಡಿ ಶಾಲೆಯ ಮುಖ್ಯ ಮೋನಿಕ , ಬಿ.ಎಂ.ಶಾಲೆಯ ಮುಖ್ಯ ಶಿಕ್ಷಕಿ, ನೂತನ್ ಜ್ಯೋತಿ, ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ಉಪಸ್ಥಿತರಿದ್ದರು.

ಜಾಹೀರಾತು

ಉಳ್ಳಾಲ ಕ್ಲಸ್ಟರಿನ ಸಂಪನ್ಮಾಲ ವ್ಯಕ್ತಿ ನಳಿನಿ ಸ್ವಾಗತಿಸಿದರು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಎಂ.ಹೆಚ್ ಮಲಾರ್ ಪ್ರಸ್ತಾವಿಕವಾಗಿ ಭಾಷಣ ಮಾಡಿದರು , ಮೊಗವೀರ ಶಾಲೆಯ ಮುಖ್ಯ ಶಿಕ್ಷಕಿ ವೇದಾವತಿ ವಂದಿಸಿದರು.

Exit mobile version