Site icon Ullalavani

ಹಡಿಲು ಭೂಮಿ ಭತ್ತದ ಕೃಷಿ ಬೈಹುಲ್ಲು ಪಜೀರು ಗೋಶಾಲೆಗೆ ಹಸ್ತಾಂತರ

UN NETWORKS

ಪಜೀರು: ಮಂಗಳೂರು ರಥಬೀದಿಯ ಡಾ| ದಯಾನಂದ ಪೈ. ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಕಾರ್ಯ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳ ನಡೆ ರೈತರ ಹಡಿಲು ಭೂಮಿಯ ಕಡೆ ಕಾರ್ಯಕ್ರಮದಲ್ಲಿ ಭತ್ತದ ಕೃಷಿಯಿಂದ ಉತ್ಪಾದನೆಯಾದ ಸುಮಾರು 30 ಸಾವಿರ ಮೌಲ್ಯದ ಬೈಹುಲ್ಲನ್ನು ರವಿವಾರ ಗೋವನಿತಾಶ್ರಯದಲ್ಲಿ ನಡೆದ ಗೋವಿಗಾಗಿ ನಾವು ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥರ ಸಮ್ಮುಖದಲ್ಲಿ ಗೋವನಿತಾಶ್ರಯದಲ್ಲಿರುವ ಗೋಶಾಲೆಗೆ ಹಸ್ತಾಂತರಿಸಲಾಯಿತು.

ಕೊಣಾಜೆ ಗ್ರಾಮದ ಎರಡು ವಾರ್ಡ್‍ಗಳಲ್ಲಿ ಕಳೆದ ಆರು ತಿಂಗಳಿನಿಂದ ಸುಮಾರು ನಾಲ್ಕು ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯನ್ನು ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳೊಂದಿಗೆ ರೆಡ್‍ಕ್ರಾಸ್, ರೋವರ್ಸ್ ರೇಂಜರ್ಸ್ ಮತ್ತು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ರಾಜ್ಯ ರೈತ ಸಂಘ ಹಸಿರು ಸೇನೆಯ ಕಾರ್ಯದರ್ಶಿ ಮನೋಹರ ಶೆಟ್ಟಿ ಸಂಪಿಗೆದಡಿ ಹರೇಕಳ ಮತ್ತು ಮುಂಬೈಯ ಉದ್ಯಮಿ ದೇವರಾಜ್ ರೈ ಹರೇಕಳ ಅವರ ಆರ್ಥಿಕ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ ನಡೆಸಿದ್ದರು.

ಭತ್ತದ ತೆನೆಯನ್ನು ಬೇರ್ಪಡಿಸಿದ ಬಳಿಕ ಉಳಿದ ಬೈಹುಲ್ಲನ್ನು ದೇವರಾಜ ರೈ ಅವರು ಗೋಶಾಲೆಗೆ ದೇಣಿಗೆಯಾಗಿ ನೀಡಿದ್ದು ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಬಾರ್ ಅವರು ಗೋವನಿತಾಶ್ರಯದ ಕಾರ್ಯದರ್ಶಿ ಡಾ| ಅನಂತಕೃಷ್ಣ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ| ನವೀನ್ ಎನ್. ಕೊಣಾಜೆ, ರಾಜ್ಯ ರೈತ ಸಂಘ ಹಸಿರು ಸೇನೆಯ ಕಾರ್ಯದರ್ಶಿ ಮನೋಹರ ಶೆಟ್ಟಿ ಸಂಪಿಗೆದಡಿ ಹರೇಕಳ, ಸಮಾಜ ಸೇವಕ ಹಾಗೂ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾೈ ಕ್, ಉದ್ಯಮಿ ಕೃಷ್ಣ ಗೌಡ ಕೋಟಿಪದವು, ದಕ್ಷ ಯುವ ಬಳಗದ ಮಾಜಿ ಅಧ್ಯಕ್ಷ ಮಹೇಶ್ ಗ್ರಾಮಚಾವಡಿ, ಎನ್‍ಎಸ್‍ಎಸ್ ಕಾರ್ಯದರ್ಶಿ ಉದಯ, ವಿದ್ಯಾರ್ಥಿಗಳಾದ ಕುಶಲ್, ಶಿವಪ್ರಸಾದ್ ಉಪಸ್ಥಿತರಿದ್ದರು.

Exit mobile version