Site icon Ullalavani

ಕಣಚೂರು ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

UN NETWORKS

ದೇರಳಕಟ್ಟೆ : ಕಣಚೂರು ಸಮೂಹ ವಿದ್ಯಾಸಂಸ್ಥೆಯಲ್ಲಿ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಕಣಚೂರು ಸಂಸ್ಥೆಯ ಮುಖ್ಯಸ್ಥರಾದ ಯು.ಕೆ ಮೋನು ರವರು ಧ್ವಜಾರೋಹಣ ಗೈದರು.

ಕಣಚೂರು ಇನ್ಸ್‍ಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಆಂಡ್ ಸಾಯನ್ಸ್ ಪ್ರಾಂಶುಪಾಲರಾದ ಪ್ರೊ. ಇಕ್ಬಾಲ್ ಅಹಮ್ಮದ್ ಯು.ಟಿ ಸ್ವಾಗತಿಸಿದರು. ಕುಮಾರ ಅನಿಕೇತ್ 8ನೇ ತರಗತಿ ವಿದ್ಯಾರ್ಥಿ ಇವರು ಗಣತಂತ್ರ ದಿನದ ಮಹತ್ವವನ್ನು ವಿವರಿಸಿದರು.

ಕಣಚೂರು ಮೆಡಿಕಲ್ ಕಾಲೇಜಿನ (ಕಮ್ಯುನಿಟಿ ಮೆಡಿಸನ್ ವಿಭಾಗದವರು) ಏರ್ಪಡಿಸಿದ ರಸ್ತೆ ಸುರಕ್ಷತೆಯ ಸಪ್ತಾಹ ಜನವರಿ 2018ರಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಜಾಹೀರಾತು

ಕಣಚೂರು ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ದುಲ್ ರಹಿಮಾನ್, ಕಣಚೂರು ಮೆಡಿಕಲ್ ಕಾಲೇಜಿನ ವೈಸ್ ಡೀನ್ ಡಾ. ಶ್ರೀಷಾ ಕಂಡಿಗೆ, ಆಡಳಿತ ಅಧಿಕಾರಿ ಡಾ. ರೊಹನ್ ಮೊನಿಸ್, ಪ್ರಾಂಶುಪಾಲರುಗಳಾದ ವಿನಿಟಾ ಗಾಮ ರೋಸ್ ಮಥಾಯಸ್, ಆನಂದಿ ಕೆ, ಹೇಮಲತಾ ಮತ್ತು ಪೂರ್ವಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಲಿನೆಟ್ ಡಿ’ಸೋಜರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯಾದ ಕುಮಾರಿ ಸಕೀನಾ ಕಾನುಮ್ ಕಾರ್ಯಕ್ರಮ ನಿರೂಪಿಸಿದರು. ಕಣಚೂರು ಮೆಡಿಕಲ್ ಕಾಲೇಜಿನ ಫಿಜಿಯೋ ಥೆರೆಪಿ ವಿಭಾಗದ ಪ್ರಾಂಶುಪಾಲರಾದ ಡಾ. ಸುಹೈಲ್‍ರವರು ವಂದಿಸಿದರು.

Exit mobile version